ತೆಕ್ಕಾರು: ತೆರಿಗೆ ಸಂಗ್ರಹದ ಸಾಧನೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಪ್ರಶಂಸನಾ ಪತ್ರ

0

ತೆಕ್ಕಾರು: 2025-26ನೇ ಸಾಲಿನಲ್ಲಿ ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ ಮತ್ತು ಭೂಮಿಗಳ ಮೇಲಿನ ವಾರ್ಷಿಕ ತೆರಿಗೆ ಬೇಡಿಕೆಯನ್ನು ಶೇ.100 ರಷ್ಟು ಸಂಗ್ರಹಣೆ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಲಾಗಿದೆ.ಈ ಸಾಧನೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಕೀರ್ತಿ ಹೆಚ್.ಬಿ ಅವರ ಕಾರ್ಯನಿಷ್ಠೆ, ಕಾರ್ಯವೈಖರಿ ಹಾಗೂ ಪಂಚಾಯತ್‌ನ ಎಲ್ಲಾ ಸಿಬ್ಬಂದಿಗಳ ಸಮನ್ವಯದ ಕೆಲಸವೇ ಪ್ರಮುಖ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಡೆ ವಿನಾಯಕ್ ಕಾರ್ಭರಿ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ. ಇದೇ ರೀತಿ ಮುಂದಿನ ವರ್ಷಗಳಲ್ಲಿಯೂ ಉತ್ತಮ ಕಾರ್ಯನಿರ್ವಹಣೆ ಮುಂದುವರಿಯಲಿ ಎಂದು ಹಾರೈಸಲಾಗಿದೆ.

LEAVE A REPLY

Please enter your comment!
Please enter your name here