







ಬೆಳ್ತಂಗಡಿ: ವಿಘ್ನೇಶ್ ಸಿಟಿ ಬಿಲ್ಡಿಂಗ್ ಎದುರು ಚರಂಡಿ ಮುಚ್ಚಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಬೆಳ್ತಂಗಡಿ ನಗರ ಪಂಚಾಯತ್ ಸಿ ಓ ರಾಜೇಶ್ ಇವರಿಗೆ ಏ.18 ರಂದು ಸೂಚನೆ ನೀಡಿದ್ದಾರೆ.ವಿಘ್ನೇಶ್ ಸಿಟಿ ವಾಣಿಜ್ಯ ಸಂಕೀರ್ಣದ ಎರಡು ಬದಿಯ ಚರಂಡಿ ಸ್ಲಾಬ್ ತೆಗೆದು ಶುಚಿಗೊಳಿಸಲಾಗಿದೆ.
ಅಕ್ಕಪಕ್ಕದಲ್ಲಿದ್ದ ಇಂಟರ್‌ಲಾಕ್ ತೆಗೆಯಲಾಗಿದೆ. ಪಟ್ಟಣ ಪಂಚಾಯತ್ ಚರಂಡಿ ಓಪನ್ ಮಾಡಿ ಸ್ವಚ್ಛಗೊಳಿಸಿದೆ. ಚರಂಡಿ ಮುಚ್ಚದೆ ಹಾಗೇ ಬಿಟ್ಟಿದೆ. ಚರಂಡಿ ಮುಚ್ಚುವುದು ನಮ್ಮ ಕೆಲಸವಲ್ಲ. ಅದನ್ನು ಕಟ್ಟಡ ಮಾಲಕರೇ ಮಾಡಬೇಕು ಎಂದು ಪಟ್ಟಣ ಪಂಚಾಯತ್ ಹೇಳುತ್ತಿದೆ. ಇದು ನಮ್ಮ ಕೆಲಸವಲ್ಲ. ನಮಗೆ ಮೂಲಭೂತ ಸೌಕರ್ಯ ಒದಗಿಸಬೇಕಾದ್ದು ಪಟ್ಟಣ ಪಂಚಾಯತ್‌ನ ಜವಾಬ್ದಾರಿ ಎಂದು ಕಟ್ಟಡ ಮಾಲಕರು ಹೇಳುತ್ತಿದ್ದಾರೆ.


ಈ ವಿಚಾರದಲ್ಲಿ ಪಟ್ಟಣ ಪಂಚಾಯತ್ ಹಾಗೂ ಕಟ್ಟಡದಲ್ಲಿರುವ ಬಾಡಿಗೆದಾರರ ಹಾಗೂ ಮಾಲಕರ ನಡುವಿನ ಜಟಾಪಟಿ ತೀವ್ರಗೊಂಡಿತ್ತು. ಅಂಗಡಿ ಮಾಲಕರು ತಮಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪಟ್ಟಣ ಪಂಚಾಯತ್ ಕಚೇರಿಗೆ ಹೋಗಿ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಘಟನೆಯೂ ನಡೆದಿತ್ತು. ಹೀಗೆ ಬೆಳ್ತಂಗಡಿಯ ವಿಘ್ನೇಶ್ ಸಿಟಿ ಕಟ್ಟಡ ಸಮೀಪದ ತೆರೆದ ಚರಂಡಿ ವಿಚಾರ ಬಗ್ಗೆ ತಾಲೂಕಿನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿತ್ತು.

ಈ ಬಗ್ಗೆ ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್ ಲಾಯಿಲ ಅವರು ಏ.18 ರಂದು ನಡೆದ ಜಿಲ್ಲಾ ಕೆಡಿಪಿ ಸಭೆಯಲ್ಲಿ ಸುದ್ದಿ ಬಿಡುಗಡೆ ನ್ಯೂಸ್ ಆಧಾರಿಸಿ ವಿಘ್ನೇಶ್ ಬಿಲ್ಡಿಂಗ್ ಚರಂಡಿ ಮುಚ್ಚದೆ ಜನರಿಗೆ ತುಂಬಾ ತೊಂದರೆಯಾಗುತ್ತಿತ್ತು , ಕಟ್ಟಡದ ಮುಂಬಾಗದಲ್ಲಿರು ವಾಹನ ನಿಲುಗಡೆ ಪ್ರದೇಶಕ್ಕೆ ಹೋಗಲಾಗದೆ ದಾರಿಯಲ್ಲಿಯೇ ವಾಹನ ನಿಲುಗಡೆ ಮಾಡುವುದರಿಂದ ಸಾರ್ವಜನಿಕರಿಗೆ ನ್ಯಾಯಾಲಯಕ್ಕೆ, ತಾಲೂಕು ಕಚೇರಿಗೆ ಹೋಗಲು ಕಷ್ಟವಾಗುತ್ತಿದೆ ಎಂದು ಹಿಂದಿನ ಮತ್ತು ಈಗಿನ ಫೋಟೋಗಳನ್ನು ತೋರಿಸಿ ಇದರ ಬಗ್ಗೆ ಕ್ರಮ ವಹಿಸಿಕೊಳ್ಳಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನಗರ ಪಂಚಾಯತ್ ಸಿ ಓ ರಾಜೇಶ್ ಅವರನ್ನು ತರಾಟೆಗೆ ತೆಗೆದುಕೊಂಡು ಒಂದು ವರ್ಷವಾದರೂ ಯಾಕೆ ಕ್ರಮ ಕೊಳ್ಳದಿರುವುದಕ್ಕೆ ಬೇಸರ ವ್ಯಕ್ತ ಪಡಿಸಿ ವಿಘ್ನೇಶ್ ಸಿಟಿ ಬಿಲ್ಡಿಂಗ್ ಎದುರು ಇಕ್ಕೆಲದಲ್ಲಿರುವ ಚರಂಡಿಯನ್ನು ಹತ್ತು ದಿನದೊಳಗೆ ಮುಚ್ಚಬೇಕು ಎಂದು ಸೊಚಿಸಿರುತ್ತಾರೆ.









