








ಬೆಳ್ತಂಗಡಿ :ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನದ ಜಾತ್ರೋತ್ಸವ ಪ್ರಯುಕ್ತ ಕೊಯ್ಯೂರು ಪಂಚದುರ್ಗಾ ಯಕ್ಷಗಾನ ಕಲಾ ಸಂಘದ ವತಿಯಿಂದ ಎ. 18ರಂದು ಗೋವರ್ಧನ ಗಿರಿ ಎಂಬ ಯಕ್ಷಗಾನ ತಾಳಮದ್ದಳೆ ಜರುಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕಾರ್ತಿಕ್ ತಾಮ್ಹಣ್ಕರ್ , ಕು.ಪದ್ಮಪ್ರಿಯಾ ಕಲ್ಲೂರಾಯ, ಚೆಂಡೆಯಲ್ಲಿ ಸುದರ್ಶನ, ಮದ್ದಳೆಯಲ್ಲಿ ರವಿಶಂಕರ ಸಹಕರಿಸಿದರು. ಅರ್ಥದಾರಿಗಳಾಗಿ ನಾರಾಯಣ ಭಟ್ ಬಾಸಮೆ, ವಿಜಯ ಕುಮಾರ್ ಎಂ. ಕೊಯ್ಯೂರು, ರಾಮಕೃಷ್ಣ ಭಟ್ ನಿನ್ನಿಕಲ್ಲು, ದಿನೇಶ್ ಭಟ್ ಬಳಂಜ ನಿರ್ವಹಿಸಿದರು.









