






ತೆಬೆಳ್ತಂಗಡಿ: ಕುಲಾಲ-ಕುಂಬಾರ ಸಮುದಾಯದ ಬಹುಕಾಲದ ಕನಸಾದ ಸಭಾಭವನ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜಾ ತಮ್ಮ ವಿವೇಚನಾ ನಿಧಿಯಿಂದ 1 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸುವ ಮೂಲಕ ಸಮುದಾಯದ ಪರವಾಗಿ ತಮಗಿರುವ ಕಾಳಜಿಯನ್ನು ಮೆರೆದಿದ್ದಾರೆ.

ಈ ಹಿಂದೆ ಸಭಾಭವನ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದ ಶಾಸಕರು, ಅದರ ಮೊದಲ ಹಂತವಾಗಿ ಈಗ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಕುಲಾಲ ಯುವ ವೇದಿಕೆಯ ಕ್ರೀಡಾಕೂಟಕ್ಕೆ 50,000 ರೂ. ವೈಯಕ್ತಿಕ ಸಹಕಾರ ನೀಡಿದ್ದಾರೆ.


ನುಡಿದಂತೆ ನಡೆದು ಸಮುದಾಯದ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತ ಶಾಸಕರನ್ನು ಕುಲಾಲ ಸಮಾಜದ ವತಿಯಿಂದ ಆತ್ಮೀಯವಾಗಿ ಗೌರವಿಸಿ, ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು.ಇದೇ ಸಂದರ್ಭದಲ್ಲಿ, 2026ರ ಏಪ್ರಿಲ್ 26 ರಂದು ನಡೆಯಲಿರುವ ಸತ್ಯನಾರಾಯಣ ಪೂಜಾ ಕಾರ್ಯಕ್ರಮಕ್ಕೆ ಶಾಸಕರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕುಲಾಲ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ, ಕಟ್ಟಡ ಸಮಿತಿ ಅಧ್ಯಕ್ಷ ಹರೀಶ್ ಕಾರಿಂಜ, ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎನ್., ಉಪಾಧ್ಯಕ್ಷ ಹೆಚ್. ಪದ್ಮಕುಮಾರ್, ಕಟ್ಟಡ ಸಮಿತಿ ಜೊತೆ ಕಾರ್ಯದರ್ಶಿ ಉಮೇಶ್ ಕುಲಾಲ್, ಯುವವೇದಿಕೆ ಅಧ್ಯಕ್ಷ ಅವಿನಾಶ್ ಮಾಣೂರು, ಕಾರ್ಯದರ್ಶಿ ತಿಲಕ್ ರಾಜ್ ಕುಲಾಲ್, ಮಹಿಳಾ ವೇದಿಕೆ ಕಾರ್ಯದರ್ಶಿ ಹಿಮಪ್ರಭಾ ಹಾಗೂ ಸಂಘದ ನಿರ್ದೇಶಕರುಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.









