






ಮೇ ಒಂದರಂದು ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಆಚರಿಸುವ ಬಗ್ಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆ.ಪಿ.ಸಿ.ಸಿ ಕಛೇರಿಯಲ್ಲಿ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಕೆ.ಪುಟ್ಟಸ್ವಾಮಿ ಗೌಡ ಅಧ್ಯಕ್ಷತೆಯಲ್ಲಿ ಕಾರ್ಮಿಕ ಘಟಕದ ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾದ್ಯಕ್ಷರುಗಳ ಪೂರ್ವಭಾವಿ ಸಭೆ ಎ 17 ರಂದು ನಡೆಯಿತು.



ಈ ಸಭೆಯಲ್ಲಿ ಇಂಟಕ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ್ ಗಾಬ,ಇಂಟಕ್ ರಾಜ್ಯಾಧ್ಯಕ್ಷರಾದ ಲಕ್ಷ್ಮೀ ವೆಂಕಟೇಶ್,ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ಯೋಗಾನಂದ, ಹರೀಶ್ ಚಕ್ರವರ್ತಿ ರಾಜ್ಯ ಉಪಾದ್ಯಕ್ಷರುಗಳಾದ ಕೆ.ಜಿ ಮೋಹನ್ ಕುಮಾರ್, ವಿಶ್ವನಾಥನ್, ಅರಣಿ ಗೌಡ, ನಿಖಿಲ್ ಶರೀಫ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಶ್ಫಕ್ ಅಫ್ನಾನ್ ಮತ್ತು ರಾಜ್ಯ ಮತ್ತು ಜಿಲ್ಲಾ ಪಧಾದಿಕಾರಿಗಳು ಹಾಜರಿದ್ದರು.









