ಮರೋಡಿ ಪೊಸರಡ್ಕದ ಬ್ರಹ್ಮಕುಂಭಾಭಿಷೇಕಕ್ಕೆ ಎಕ್ಸೆಲ್ ಕಾಲೇಜಿನ ಸುಮಂತ್ ಕುಮಾರ್ ಜೈನ್ ಗೆ ಆಮಂತ್ರಣ; ಬೆಳ್ಳಿಬೀಡು ಹೇಮರಾಜ್ ಕೆ ಅವರಿಗೆ ಗೌರವಾರ್ಪಣೆ

0

ಮರೋಡಿ: ಶ್ರೀ ದೈವ, ಶ್ರೀ ಕೊಡಮಣಿತ್ತಾಯ,ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿ ಮರೋಡಿ ಪೊಸರಡ್ಕ ಇಲ್ಲಿನ ಬ್ರಹ್ಮಕುಂಭಾಭಿಷೇಕ ಸಂಭ್ರಮವು ಎ. 28 ರಿಂದ ಮೇ 1ರವರೆಗೆ ನಡೆಯಲಿದ್ದು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾ‌ರ್ ಜೈನ್ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.ಈ ಸಂದರ್ಭದಲ್ಲಿ ಪೊಸರಡ್ಕ ಕ್ಷೇತ್ರದ ಗೌರವಾಧ್ಯಕ್ಷರಾದ ಬೆಳ್ಳಿಬೀಡು ಹೇಮರಾಜ್ ಕೆ ಅವರನ್ನು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಗೌರವಿಸಿ, ಸನ್ಮಾನಿಸಿದರು.

ಎಕ್ಸೆಲ್ ಟೆಕ್ನ ಸ್ಕೂಲ್ ಆಡಳಿತ ಸಮಿತಿಯ ಸಹನಾ ಜೈನ್, ಎಕ್ಸೆಲ್ ಕಾಲೇಜಿನ ನಿಶಾ, ಶ್ರುತಿ,ರಿತೇಶ್ ಕುಮಾರ್ ಹಾಗೂ ಇತರರು ಜೊತೆಗಿದ್ದರು.

LEAVE A REPLY

Please enter your comment!
Please enter your name here