ಶ್ರೀ ಕ್ಷೇತ್ರ ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾಲೋಚನೆ ಸಭೆ

0

ಮಡಂತ್ಯಾರು: ಶ್ರೀ ಕ್ಷೇತ್ರ ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದಲ್ಲಿ 2027ರಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಕ್ಷೇತ್ರದಲ್ಲಿ ನಡೆಯುಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಲು ಸಮಾಲೋಚನೆ ಸಭೆ ದೇಗುಲದ ಸಭಾಂಗಣದಲ್ಲಿ ಏ.15ರಂದು ನಡೆಯಿತು.

ಕ್ಷೇತ್ರದ ಅಭಿವೃದ್ಧಿ ಹಾಗೂ ಬ್ರಹ್ಮಕಲಶೋತ್ಸವದ ಸಂದರ್ಭನಡೆಯಲಿರುವ ಜೀರ್ಣೋದ್ಧಾರ ಕಾಮಗಾರಿಗಳ ಬಗ್ಗೆ ಆಡಳಿತ ಮೊಕ್ತೇಸರ ಪುನೀತ್ ಕುಮಾರ್ ಮಡಂತ್ಯಾರ್ ಮಾತನಾಡಿ, ಎಲ್ಲರ ಸಹಕಾರ ಕೋರಿದರು. ಪ್ರಧಾನ ಅರ್ಚಕರಾದ ಪೇಜಾವರ ಟಿ. ವಿ. ಶ್ರೀಧರ ರಾವ್ ಮಾತನಾಡಿ, ಮೇ 17 ರಂದು ಕ್ಷೇತ್ರದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಯಲಿದೆ ಗ್ರಾಮಸ್ಥರು ಪಾಲ್ಗೊಳ್ಳಬೇಕಾಗಿ ವಿನಂತಿಸಿದರು. ದೇಗುಲದಲ್ಲಿ ಇತ್ತೀಚೆಗೆ ನಡೆದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕೂಡ ವಿವರಿಸಿದರು.

ನೂತನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ವೀರೇಂದ್ರ ಕುಮಾ‌ರ್ ಮಡಂತ್ಯಾ‌ರ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇವರೊಂದಿಗೆ 15 ಜನ ಜೀರ್ಣೋದ್ಧಾರ ಸಮಿತಿ ಸದಸ್ಯರ ಸಮಿತಿಯನ್ನು ರಚಿಸಲಾಯಿತು. ದೇಗುಲದ ಅಭಿವೃದ್ಧಿ ಕಾರ್ಯಕ್ಕೆ ಸರ್ವರೂ ಸಹಕರಿಸಬೇಕು ಎಂದು ವಿನಂತಿಸಿದರು.

ಮಾಜಿ ಆಡಳಿತ ಮೋಕ್ತೇಸರರಾದ ವಿಠಲ ಶೆಟ್ಟಿ ಮೂಡಾಯೂರು, ರತ್ನಾಕರ ಶೆಟ್ಟಿ ಮೂಡಯೂರು ಹಿರಿಯರು, ಗ್ರಾಮಸ್ಥರು ಸಲಹೆ ಸೂಚನೆ ನೀಡಿದರು.ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here