ಗೇರುಕಟ್ಟೆ ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ” ಬರಾಯ ಪ್ರೀಮಿಯರ್ ಲೀಗ್ “ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

0

ಗೇರುಕಟ್ಟೆ ಪ್ರೌಢ ಶಾಲಾ ಮೈದಾನದಲ್ಲಿ ಬರಾಯ ಪ್ರೀಮಿಯರ್ ಲೀಗ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಎ 12 ರಂದು ಜರಗಿತು.ಸುರೇಂದ್ರ ಕುಮಾರ್ ಜೈನ್ ಪಂದ್ಯಾಕೂಟವನ್ನು ಉದ್ಘಾಟಿಸಿದರು.ಕುಸುಮ.ಎನ್ ಬಂಗೇರ ಉಪಸ್ಥಿತರಿದ್ದರು.

ಬಹುಮಾನ ವಿತರಣೆಯನ್ನು ಅಬ್ದುಲ್ ಕರೀಮ್ ಗೇರುಕಟ್ಟೆ, ಉದಿತ್ ಕುಮಾರ್ ಬರಾಯ, ವಾಸುದೇವರಾವ್ ,ಜಯಾನಂದ ಶೆಟ್ಟಿ ಮುಗೇರ್ ಮಾರ್,ಕರುಣಾಕರ ಶೆಟ್ಟಿ ಕೊರಂಜ,ಸಾದಿಕ್ ಕೆಂಪಿ ಪ್ರಸಾದ್ ಬೆರ್ಕೆತ್ತೋಡಿ ಹಾಜರಿದ್ದರು.

ಒಟ್ಟು 5 ತಂಡಗಳು ಬಾಗವಹಿಸಿದ್ದವು.ಪ್ರಥಮ ಸ್ಥಾನವನ್ನು ಪೋನಿಕ್ಸ್ ಟೈಟನ್ ಕುಂಟಿನಿ ತಂಡವು,ದ್ವಿತೀಯ ಸ್ಥಾನವನ್ನು ರಾಯಲ್ ಸ್ಟೈಕರ್ ಮಂಜಲಡ್ಕ ತಂಡವು ತೃತಿಯ ಸ್ಥಾನವನ್ನು ಅಶ್ವಸೇನ ವಾರಿಯರ್ಸ್ ಚತುರ್ಥ ಸ್ಥಾನವನ್ನು ಶ್ಯಾಡೋ ವಾರಿಯರ್ಸ್ ತಂಡವು ಪಡೆಯಿತು.ಸಂದೀಪ್ ನಾಳ ಆಲ್ ರೌಂಡರ್, ಸುಮಂತ್ ಕಂಗಿನಡೆ ಉತ್ತಮ ಬ್ಯಾಟ್ಸ್ ಮನ್, ಚೇತನ್ ಬರಾಯ ಉತ್ತಮ ವಿಕೇಟ್ ಕೀಪರ್, ನಿತಿನ್ ಬರಾಯ ಉತ್ತಮ ಫೀಲ್ಡರ್ ಆಗಿ,ಧನುಶ್ ಉತ್ತಮ ಬೌಲರ್ ಆಗಿ ಆಯ್ಕೆಯಾದರು.

LEAVE A REPLY

Please enter your comment!
Please enter your name here