







ವೇಣೂರು : ವೇಣೂರು ಪ. ಪೂ. ಕಾಲೇಜಿನ ಪಿ ಯು ಸಿ ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಒಟ್ಟು 215 ವಿದ್ಯಾರ್ಥಿಗಳಲ್ಲಿ 205 ಮಂದಿ ವಿದ್ಯಾರ್ಥಿಗಳು ಉತ್ತಿರ್ಣರಾಗಿ ಶೇ. 95.35 ಫಲಿತಾಂಶ ಬಂದಿದೆ.ವಾಣಿಜ್ಯ ವಿಭಾಗದಲ್ಲಿ ಹಾಜರಾದ 88 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ. 100 ಫಲಿತಾಂಶ ಬಂದಿದೆ.


ಈ ಪೈಕಿ 25 ಮಂದಿ ಉನ್ನತ ಶ್ರೇಣಿಯಲ್ಲಿ, 55 ಮಂದಿ ಪ್ರಥಮ ಶ್ರೇಣಿ , 6 ಮಂದಿ ದ್ವಿತೀಯ ಶ್ರೇಣಿ, 2 ಮಂದಿ ತ್ರೀತಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಹಾಜರಾದ 76 ಮಂದಿ ವಿದ್ಯಾರ್ಥಿಗಳಲ್ಲಿ 74 ಮಂದಿ ಉತ್ತೀರ್ಣರಾಗಿ ಶೇ. 97.37 ಫಲಿತಾಂಶ ಬಂದಿದ್ದು ಇದರಲ್ಲಿ 21 ಮಂದಿ ಉನ್ನತ ಶ್ರೇಣಿಯಲ್ಲಿ, 41 ಮಂದಿ ಪ್ರಥಮ ಶ್ರೇಣಿ, 12 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ಹಾಜರಾದ 51 ವಿದ್ಯಾರ್ಥಿಗಳಲ್ಲಿ 43 ಮಂದಿ ತೇರ್ಗಡೆಯಾಗಿ ಶೇ. 84.31 ಫಲಿತಾಂಶ ಬಂದಿದೆ ಈ ಪೈಕಿ ಉನ್ನತ ಶ್ರೇಣಿಯಲ್ಲಿ 6 ಮಂದಿ, ಪ್ರಥಮ ಶ್ರೇಣಿಯಲ್ಲಿ 27 ಮಂದಿ, ದ್ವಿತೀಯ ಶ್ರೇಣಿಯಲ್ಲಿ 8 ಮಂದಿ , ಇಬ್ಬರು ತ್ರೀತಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.









