







ಬೆಳ್ತಂಗಡಿ ರಸ್ತೆಯ ಬದಿ ಕಸ ಸುರಿದು ಹೋದವರನ್ನು ಹುಡುಕಿ ಲಾಯಿಲ ಗ್ರಾಮ ಪಂಚಾಯಿತಿ ವತಿಯಿಂದ ದಂಡ ವಿಧಿಸದ ಘಟನೆ ಏ 10 ರಂದು ನಡೆದಿದೆ.


ಬೆಳ್ತಂಗಡಿ ತಾಲೂಕಿನ ಲಾಯಿಲ ಟಿ. ಬಿ ಕ್ರಾಸ್ ಪ್ರದೇಶದಲ್ಲಿ ಹತ್ತಾರು ಗೋಣಿಚೀಲಗಳನ್ನು ರಸ್ತೆ ಬದಿ ಎಸೆದು ಅಕ್ರಮ ಕಸ ವಿಲೇವಾರಿ ಮಾಡುತ್ತಿರುವ ಬಗ್ಗೆ ಗ್ರಾಮ ಪಂಚಾಯತ್ ದೂರು ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ, ಪಂಚಾಯತ್ ಲೆಕ್ಕ ಸಹಾಯಕಿ ಸುಪ್ರೀತಾ ಶೆಟ್ಟಿ, ಪಂಚಾಯತ್ ಸಿಬ್ಬಂದಿಗಳೊಂದಿಗೆ ಹಾಗೂ ಸ್ವಚ್ಛತಾ ಸಿಬ್ಬಂದಿ ವರ್ಗದವರೊಂದಿಗೆ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಸಂಬಂಧ ಪಟ್ಟವರ ಮಾಹಿತಿ ಪಡೆದುಕೊಂಡು ಕಸ ರಸ್ತೆ ಬದಿ ಎಸೆದವರಿಗೆ ತಕ್ಷಣ ದೂರವಾಣಿ ಕರೆಯ ಮೂಲಕ ಸ್ಥಳಕ್ಕೆ ಬರಲು ಹೇಳಿ ಸೂಕ್ತ ಮಾಹಿತಿಯೊಂದಿಗೆ ಕಸ ಬಿಸಾಡದಂತೆ ಎಚ್ಚರಿಕೆ ನೀಡಿ ಕಸ ಎಸೆದಿರುವ ವಿಚಾರ ಒಪ್ಪಿಕೊಂಡು ತಕ್ಷಣ 2000 ರೂ. ದಂಡವನ್ನು ಲಾಯಿಲ ಪಂಚಾಯಿತಿಗೆ ಪಾವತಿಸಿದ್ದಾರೆ.









