ಮಡಂತ್ಯಾರು ಗಾರ್ಡಿಯನ್ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ತರ ರಜತ ಮಹೋತ್ಸವ ಸಮಾರೋಪ ಸಮಾರಂಭ

0

ಮಡಂತ್ಯಾರು : 1890ರಲ್ಲಿ ಧರ್ಮಗುರುಗಳ ಮನೆಯಲ್ಲಿ ಪ್ರಾರಂಭಗೊಂಡ ಗಾರ್ಡಿಯನ್ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ತರ ರಜತ ಮಹೋತ್ಸವ ಸಮಾರೋಪ ಸಮಾರಂಭವು ಎ. 9ರಂದು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ಜರಗಿತು.ಮಂಗಳೂರು ಕಥೋಲಿಕ ಧರ್ಮಕ್ಷೇತ್ರ ಅಧ್ಯಕ್ಷರು, ಕಥೋಲಿಕ ಶಿಕ್ಷಣ ಮಂಡಳಿ ಅಧ್ಯಕ್ಷರು ಧರ್ಮಾಧ್ಯಕ್ಷರು ಡಾ. ಪೀಟ‌ರ್ ಪಾವ್ಲ್ ಸಲ್ದಾನ್ಹಾ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಕಥೋಲಿಕ ಶಿಕ್ಷಣ ಮಂಡಳಿ ಕಾರ್ಯದರ್ಶಿ ವಂ. ಡಾ. ಪ್ರವೀಣ್ ಲಿಯೋ ಲಸ್ರಾದೊ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಶಾಸಕ ಹರೀಶ್ ಪೂಂಜ, ಕರ್ನಾಟಕ ವಿಧಾನ ಪರಿಷತ್ತು ಸದಸ್ಯ ಪ್ರತಾಪ ಸಿಂಹ ನಾಯಕ್, ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ (ಆಡಳಿತ) ಅರುಣ್ ಫುರ್ಟಾಡೊ ಕೆ.ಎ.ಎಸ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಾಂತ್ ಎಲ್.,ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಶ್ರೀಮತಿ ಚೇತನಾ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನೆಲ್ಸನ್ ಲಸ್ರಾದೊ, ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಯೋಜಕರು, ಮುಖ್ಯೋಪಾಧ್ಯಾಯಿನಿಶ್ರೀಮತಿ ಹೆಲೆನ್ ಮೊನಿಕಾ ಲೋಬೊ,ಶತಮಾನೋತ್ತರ ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಜೆರಾಲ್ಡ್ ಮೊರಾಸ್,ಕಥೋಲಿಕ ಶಿಕ್ಷಣ ಸಂಸ್ಥೆಗಳ ಜೊತೆ ಕಾರ್ಯದರ್ಶಿ ಡಾ.ಸ್ವಾನಿ ಗೋವಿಯಸ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಣ ಸಂಯೋಜಕ ಸಿದ್ದಲಿಂಗ ಸ್ವಾಮಿ, ಫಾ. ವಲೇರಿಯನ್ ಫ್ರಾಂಕ್, ವಂ. ಫಾ. ಬೇಸಿಲ್ ವಾಸ್, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ದೀಪಕ್ ಡೇಸಾ, ಅನಿಲ್ ರೋಷನ್, ಲಾರಿ ಪಿಂಟೊ,ಲಿಯೋ ರೊಡ್ರಿಗಸ್,ಪದವಿ ಕಾಲೇಜು ಪ್ರಾಂಶುಪಾಲರು ಅಲೆಕ್ಸ್ ಐವನ್, ಪದವಿ ಕಾಲೇಜ್ ಪೂರ್ವ ಕಾಲೇಜು ಪ್ರಾಂಶುಪಾಲರು ಸೂರಜ್, ರಾಜಶೇಖರ್ ಶೆಟ್ಟಿ, ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜೋಯೇಲ್ ಮೆಂಡೋನ್ಸ, ಉಪಾಧ್ಯಕ್ಷ ಕಾಂತಪ್ಪ ಗೌಡ, ಪ್ರಶಾಂತ್ ಪಾರಂಕಿ, ವಿನ್ಸೆಂಟ್ ಡಿಸೋಜ, ಅಬ್ದುಲ್ ರಹಿಮಾನ್ ಪಡ್ಪು, ವಿಲ್ಸನ್ ಗೊನ್ಸಲ್ವಿಸ್, ಲಿಯೋ ನೊರೋನ್ಹ,ಶಾಲಾ ಆಡಳಿತ ಮಂಡಳಿ,ಶತಮಾನೋತ್ತರ ಬೆಳ್ಳಿ ಹಬ್ಬ ಸಮಿತಿ ಸದಸ್ಯರು,ಶಿಕ್ಷಕ ರಕ್ಷಕ ಸಂಘ ಸದಸ್ಯರು,ಅಧ್ಯಾಪಕ ಮತ್ತು ವಿದ್ಯಾರ್ಥಿ ವೃಂ,ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಶಾಲೆಯ ಅಧ್ಯಕ್ಷರು ಬಿಷಪ್ ಪೀಟರ್ ಪೌಲ್ ಸಾಲ್ದಾನ, ಹಿಂದೆ ಸೇವೆ ಸಲ್ಲಿಸಿದ ಸಂಚಾಲಕರಿಗೆ, ಶಿಕ್ಷಕರಿಗೆ ಸಹಕರಿಸಿದವರಿಗೆ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here