ಹತ್ಯಡ್ಕ-ಅರಸಿನಮಕ್ಕಿ ಸರಕಾರಿ ಪಿಯು ಕಾಲೇಜಿಗೆ ಫಲಿತಾಂಶ: ಶೇ. 96ರಷ್ಟು ಫಲಿತಾಂಶ; ವಾಣಿಜ್ಯ ಭಾಗದಲ್ಲಿ 100% ಫಲಿತಾಂಶ

0

ಅರಸಿನಮಕ್ಕಿ: ಬೆಳ್ತಂಗಡಿ ತಾಲೂಕಿನ ಹತ್ಯಡ್ಕ-ಅರಸಿನಮಕ್ಕಿ ಸರಕಾರಿ ಪದವಿ ಪೂರ್ವ ಕಾಲೇಜು ಮಾರ್ಚ್ 2026ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಒಟ್ಟು ಶೇ. 96ರಷ್ಟು ಫಲಿತಾಂಶ ದಾಖಲಿಸಿದೆ.ಪರೀಕ್ಷೆಗೆ ಹಾಜರಾದ ಒಟ್ಟು 27 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ನೂರಕ್ಕೆ ನೂರು ಸಾಧನೆವಾಣಿಜ್ಯ ವಿಭಾಗದ ಫಲಿತಾಂಶವು ಅತ್ಯಂತ ಗಮನಾರ್ಹವಾಗಿದ್ದು, ಪರೀಕ್ಷೆಗೆ ಹಾಜರಾದ ಎಲ್ಲಾ 14 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 100ರಷ್ಟು ಫಲಿತಾಂಶ ದಾಖಲಾಗಿದೆ.ಹರ್ಷಿತಾ ಎಸ್. (579 ಅಂಕ) ಪ್ರಥಮ ಸ್ಥಾನ ಪಡೆದರೆ, ಕೀರ್ತನಾ (566 ಅಂಕ) ಹಾಗೂ ಸುಷ್ಮಾ (559 ಅಂಕ) ಹರ್ಷಿತಾ (537ಅಂಕ) ಶೈಲೇಶ್ ( 536 ಅಂಕ) ಲಿಖಿತ ( 529 ಅಂಕ) ಅನನ್ಯ ( 518 ಅಂಕ) ದೀಕ್ಷಾ (511 ಅಂಕ) ವಿವೇಕ್ ( 509 ಅಂಕ) ಹಾಗೂ ಧನಂಜಯ( 474 ಅಂಕ) ಕೃತಿ ಕೆ ಎಸ್ (453 ಅಂಕ) ಗಳಿಸಿದ ವಿದ್ಯಾರ್ಥಿಗಳಾಗಿದ್ದಾರೆ.

ಕಾಲೇಜಿನ ಈ ಶೈಕ್ಷಣಿಕ ಸಾಧನೆಗೆ ಪ್ರಾಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here