ಕೇರಳದಲ್ಲಿ ಹೊಟೇಲ್ ಮಾಲಕನ ಕೊಲೆ; ಕಿಲ್ಲೂರು ಪೆರ್ದಾಡಿಯ ಇರ್ಷಾದ್ ಬಂಧನ

0

ಬೆಳ್ತಂಗಡಿ; ಕೇರಳದಲ್ಲಿ ತಾನು‌ ಕೆಲಸ ಮಾಡುತ್ತಿದ್ದ ಹೊಟೇಲ್‌ನ ಮಾಲಕನನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪದಡಿ ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಸಮೀಪದ ಪೆರ್ದಾಡಿ ನಿವಾಸಿ ಇರ್ಷಾದ್ (30) ಎಂಬಾತನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ‌.

ಕೇರಳದ ಚಡಯಮಂಗಳ- ಕುರಿಯೋಡು ಮಧ್ಯೆ ‘ ಸ್ಲೈಸಿ’. ಎಂಬ ಹೆಸರಿನ ಹೊಟೇಲ್ ಉದ್ಯಮ ನಡೆಸುತ್ತಿದ್ದ ಶಕೀರ್ ಹುಸೈನ್ ಎಂಬವರು ಇರ್ಷಾದ್‌ನ ದಾಳಿಯಿಂದ ಕೊಲೆಯಾದವರು.ಅಕ್ಕಿ ಗೋಣಿಯ ಕೂಪನ್ ‌ಗಾಗಿ ನೆಲಕ್ಕುರುಳಿದ ದೇಹ;”ಕುಝಿ ಮಂದಿ” ಬಿರಿಯಾಣಿ ಪಾಕ ತಜ್ಞನಾಗಿದ್ದ ಇರ್ಷಾದ್ ತಾನು ಕೆಲಸ ಮಾಡುತ್ತಿದ್ದ ಹೋಟೇಲ್‌ಗೆ ಬರುತ್ತಿದ್ದ ಅಕ್ಕಿ ಮೂಟೆಯಲ್ಲಿರುವ 50, 100 ಮತ್ತು 150 ರೂಪಾಯಿಗಳ ಕೂಪನ್ ಗಾಗಿ ಈ‌ ಕೃತ್ಯವೆಸಗಿದ್ದಾನೆ. ಅಕ್ಕಿ‌ಮೂಟೆಯಲ್ಲಿ ಬರುತ್ತಿದ್ದ ಕೂಪನ್ ಒಟ್ಟು‌ ಸೇರಿಸಿ ಮಾಲಕರಿಗೆ ಕೊಡಬೇಕೆಂದು ಹೊಟೇಲ್ ಮಾಲಕ ಕೇರಳದ ಆಕಲ್ ನಿವಾಸಿ ಶಕೀರ್‌ ಹುಸೈನ್ ನಿರ್ದೇಶನ‌ ನೀಡಿದ್ದರು.

ಅದಾಗ್ಯೂ ಇರ್ಷಾದ್ ಕೂಪನ್ ಗಳನ್ನು ತಾನೇ ಸಂಗ್ರಹಿಸಿಟ್ಟುಕೊಂಡಿದ್ದ. ಇದನ್ನು ಪ್ರಶ್ನಿಸುವ ಸಲುವಾಗಿ ಪತ್ನಿಯೊಂದಿಗೆ ಆತ ವಿಶ್ರಾಂತಿ ಪಡೆಯುತ್ತಿದ್ದ ವಸತಿ ಕಟ್ಟಡದ ಎರಡನೇ ಮಹಡಿಗೆ ಹೋಗಿದ್ದ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇರ್ಷಾದ್ ಚಾಕು ತೆಗೆದು ಮಾಲಕನ ಎದೆಗೆ ಬಲವಾಗಿ ಚುಚ್ಚಿದ್ದಾನೆ. ಈ ವೇಳೆ ನೆಲಕ್ಕುರುಳಿದ ಅವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸಾಗಿಸಿದರೂ ಅವರು ಬದುಕುಳಿಯಲಿಲ್ಲ. ವಸ್ರ್ತ ಬದಲಾಯಿಸಿ ಡೆಲಿವರಿ ಬಾಯಿ ಸ್ಕೂಟರ್ ನಲ್ಲಿ ಕಾಲ್ಕಿತ್ತ ಆರೋಪಿ;ಮಾಲಿಕನನ್ನು ಕೊಲೆ ಮಾಡಿದ ಆರೋಪಿ ತಕ್ಷಣ ವಸ್ರ್ತ ಬದಲಿಸಿ ಯಾರಿಗೂ ತಿಳಿಯದಂತೆ ಅದೇ ಹೊಟೇಲ್‌ನ ಸಿಬ್ಬಂದಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದ.

ಅಲ್ಲಿಂದ ತಪ್ಪಿಸಿಕೊಂಡ ಆತನ ಹುಡುಕಾಟಕ್ಕೆ ಪೊಲೀಸರು ತಕ್ಷಣ ಬಲೆ‌ ಬೀಸಿ ಕಾರ್ಯಾಚರಣೆಗಿಳಿದಿದ್ದಾರೆ. ಚಡಯಮಂಗಳ ಮತ್ತು ಮನ್ನಾಂದಲ ಪೊಲೀಸರು ಊರವರ ಸಹಕಾರದೊಂದಿದೆ ವ್ಯೂಹ ರಚಿಸಿ ಪತ್ತೆ ಕಾರ್ಯ ಕೈಗೊಂಡಿದ್ದು ಈ ವೇಳೆ ಆರೋಪಿಯು ಕೆಎಸ್‌ಆರ್‌ಟಿಸಿ ಬಸ್ಸು ಹತ್ತಿ ಪರಾರಿಯಾಗಲು ಯತ್ನಿಸಿದ್ದ. ಅಲ್ಲಿಂದ ಆತನನ್ನು ಬಂಧಿಸಿ ಕೊಲ್ಲಂ‌ ಜೈಲಿಗಟ್ಟಲಾಗಿದೆ.

LEAVE A REPLY

Please enter your comment!
Please enter your name here