ಗೇರುಕಟ್ಟೆ: ಕೊರಂಜ ಶಾಲೆಯಲ್ಲಿ ತರಗತಿ ಕೊಠಡಿ ಎಕ್ಸೆಲ್ ಸುಮಂತ್ ಕುಮಾರ್ ಜೈನ್ ರಿಂದ ಉದ್ಘಾಟನೆ; ನಿವೃತ್ತಿ ಹೊಂದಲಿರುವ ಮುಖ್ಯ ಶಿಕ್ಷಕಿಗೆ ಮತ್ತು ಸಾಧಕರಿಗೆ ಸನ್ಮಾನ

0

ಕೊರಂಜ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಪೋಷಕರು, ಶಾಲಾಭಿವೃದ್ಧಿ ಸಮಿತಿ, ಶಿಕ್ಷಕವೃಂದ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಿರಿಯ ವಿದ್ಯಾರ್ಥಿಗಳು,ಹಾಗೂ ಊರ ಪರವೂರಿನ ದಾನಿಗಳಿಂದ ನಿರ್ಮಿಸಲ್ಪಟ್ಟ ಸುಸಜ್ಜಿತ ತರಗತಿ ಕೊಠಡಿಯನ್ನು ದೀಪ ಬೆಳಗಿಸುವ ಮೂಲಕ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಸುಮಂತ್ ಕುಮಾರ್ ಜೈನ್ ಎ.8 ರಂದು ಉದ್ಘಾಟಿಸಿದರು.

ಕಳಿಯ ಸಿ.ಎ.ಬ್ಯಾಂಕಿನ ಅಧ್ಯಕ್ಷ ವಸಂತಮಜಲು ಹಾಜರಿದ್ದರು. ಕಾರ್ಯಕ್ರಮದಲ್ಲಿ ಈ ಶಾಲೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ, ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಬರುವ ತಿಂಗಳು ನಿವೃತ್ತಿ ಹೊಂದಲಿರುವ ಮುಖ್ಯ ಶಿಕ್ಷಕಿ ಶಾಂತಾ, ಸಾಧಕರಾದ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಪಿ ಎಚ್ ಡಿ ಡಾಕ್ಟರೇಟ್ ಪದವಿ ಪಡೆದ ಕೇಶವ ಬಂಗೇರ ಗೇರುಕಟ್ಟೆ, ವೇದಿಕೆ ರಚನೆಗೆ ಸಂಪೂರ್ಣ ಗ್ರಾನೈಟ್ ನೀಡಿದ ಶಾಲೆಯ ಹಿರಿಯ ಶಿಕ್ಷಕಿ ಅನುರಾಧಾ ಬಿ ಸಿ,ಶಾಲೆಯ ನಿವೃತ್ತಿ ಹೊಂದಿದ ಅಡುಗೆ ಸಹಾಯಕಿ ಶ್ರೀಮತಿ ಕುಸುಮ ಬರಾಯ ಇವರನ್ನು ಸನ್ಮಾನಿಸಲಾಯಿತು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಿ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಶಾಂತ್,ನಿವೃತ್ತ ಉಪಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಯಶೋದರ ಕೆ, ನಾಟಿ ವೈದ್ಯ ಬಿ.ಎಚ್.ಆದಂ ಶಾಫಿ,ಹಿರಿಯ ವಿದ್ಯಾರ್ಥಿ ರಂಜನ್ ಕೆಳಗಿನಬೆಟ್ಟು ಹಾಜರಿದ್ದರು.

ಸಭೆಯಲ್ಲಿ ಅಬ್ದುಲ್ ಕರೀಮ್ ಗೇರುಕಟ್ಟೆ, ಕೇಶವ ಪೂಜಾರಿ, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರು,ಶಾಲಾಭಿವೃದ್ಧಿ ಸಮಿತಿಯ ಉಪಾದ್ಯಕ್ಷರು, ಸದಸ್ಯರು,ಮಾಜಿ ಅಧ್ಯಕ್ಷರು,ಸದಸ್ಯರುಗಳು, ಮಾಜಿ ಪಂಚಾಯತ್ ಸದಸ್ಯರುಗಳು, ಶಿಕ್ಷಕವೃಂದ, ಪೋಷಕರು, ಬಿಸಿಯೂಟ ಸಿಬ್ಬಂದಿಗಳು,ಊರ ಪರವೂರವರು,ವಿದ್ಯಾಭಿಮಾನಿಗಳು,ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಸಹ ಶಿಕ್ಷಕರಾದ ಕಿರಣ್ ಕುಮಾರ್ ಸ್ವಾಗತಿಸಿದರು. ಸಹ ಶಿಕ್ಷಕಿ ಮಮತಾ ಕೆ ಕಾರ್ಯಕ್ರಮ ನಿರೂಪಿಸಿ ದೈಹಿಕ ಶಿಕ್ಷಣ ಶಿಕ್ಷಕರಾದ ರವಿರಾಜ್ ಗೌಡ ದನ್ಯವಾದವಿತ್ತರು.

LEAVE A REPLY

Please enter your comment!
Please enter your name here