






ಉಜಿರೆ: ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಈ ವರ್ಷದ ವಾರ್ಷಿಕ ವಿಷು ಜಾತ್ರಾ ಮಹೋತ್ಸವವು ಏಪ್ರಿಲ್ 14 ರಿಂದ ಜರುಗಲಿದೆ. ಧರ್ಮಾಧಿಕಾರಿ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ವಿವಿಧ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಈ ಉತ್ಸವವು ನಡೆಯಲಿದೆ.


ಧ್ವಜಾರೋಹಣ: ಏಪ್ರಿಲ್ 14ರ ಪರಾಭವ ಸಂವತ್ಸರದ ಮೇಷ ಸಂಕ್ರಮಣದ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಲಿದ್ದು, ಜಾತ್ರೆಗೆ ಅಧಿಕೃತ ಚಾಲನೆ ಸಿಗಲಿದೆ.ಸೌರ ಯುಗಾದಿ: ಏಪ್ರಿಲ್ 15 ರಂದು ಸೌರ ಯುಗಾದಿ (ವಿಷು) ಹಾಗೂ ಧರ್ಮನೇಮ ಕಾರ್ಯಕ್ರಮಗಳು ನಡೆಯಲಿವೆ.ದೈವಗಳ ನೇಮ: ಏಪ್ರಿಲ್ 16 ರಂದು ಅಣ್ಣಪ್ಪ ದೈವಗಳ ನೇಮ ಹಾಗೂ ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ ನೆರವೇರಲಿದೆ.
ಏಪ್ರಿಲ್ 17 ರಿಂದ 20 ರವರೆಗೆ ಕ್ರಮವಾಗಿ ಕಂಚಿಮಾರುಕಟ್ಟೆ ಉತ್ಸವ, ಲಲಿತೋದ್ಯಾನವನ ಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ ಹಾಗೂ ಗೌರಿಮಾರುಕಟ್ಟೆ ಉತ್ಸವ ಮತ್ತು ಚಂದ್ರಮಂಡಲ ಉತ್ಸವಗಳು ಜರುಗಲಿವೆ.ಮನ್ಮಹಾರಥೋತ್ಸವ: ಏಪ್ರಿಲ್ 21 ರಂದು ವೈಭವದ ಶ್ರೀ ಮನ್ಮಹಾರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು, ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.ಏಪ್ರಿಲ್ 22 ರಂದು ಅವಬೃಥ ಸ್ನಾನ ಹಾಗೂ ಧ್ವಜಾವರೋಹಣದೊಂದಿಗೆ ಈ ಬಾರಿಯ ವಾರ್ಷಿಕ ವಿಷು ಜಾತ್ರಾ ಮಹೋತ್ಸವವು ಸಂಪನ್ನಗೊಳ್ಳಲಿದೆ.









