ದಯಾ ವಿಶೇಷ ಶಾಲೆಯಲ್ಲಿ ಆಟಿಸಂ ಜಾಗೃತಿ ಕಾರ್ಯಕ್ರಮ

0

ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ವಿಶ್ವ ಆಟಿಸಂ ಜಾಗೃತಿ ದಿನದ ಅಂಗವಾಗಿ ಆಟಿಸಂ ಕುರಿತು ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ದಿವ್ಯ ಶಾಲೆಯ ಎಲ್ಲಾ ಸಿಬ್ಬಂದಿಗಳಿಗೆ ಆಟಿಸಂ (Autism Spectrum Disorder) ಮತ್ತು ಅದರ ಲಕ್ಷಣಗಳು, ಮಕ್ಕಳ ನಡವಳಿಕೆ ಹಾಗೂ ಅವರಿಗೆ ನೀಡಬೇಕಾದ ಸಹಾಯ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.

ಶಾಲೆಯ ನಿರ್ದೇಶಕರಾದ ಫಾ. ವಿನೋದ್ ಮಸ್ಕರೇನಸ್ ಅವರು ಮಾತನಾಡಿ, “ವಿಶೇಷ ಚೇತನ ಮಕ್ಕಳನ್ನು ಎಲ್ಲರೂ ಸಮಾನವಾಗಿ ನೋಡಬೇಕು. ಅವರ ಭವಿಷ್ಯವನ್ನು ರೂಪಿಸುವಲ್ಲಿ ನಮ್ಮ ಸಂಸ್ಥೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅವರು ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿ, ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕು, ಆರೋಗ್ಯ ಸೇವೆಗಳ ಹಕ್ಕು, ಸುರಕ್ಷಿತ ವಾತಾವರಣದಲ್ಲಿ ಬೆಳೆಯುವ ಹಕ್ಕು, ಸಮಾನತೆ ಹಾಗೂ ಗೌರವದಿಂದ ಬದುಕುವ ಹಕ್ಕುಗಳಿವೆ ಇವೆಲ್ಲವೂ ನಮ್ಮ ವಿಶೇಷ ಚೇತನ ಮಕ್ಕಳಿಗೂ ದೊರಕಬೇಕು ಎಂದು ಹೇಳಿದರು.

ವಿಶೇಷ ಚೇತನ ಮಕ್ಕಳಿಗೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಎಲ್ಲಾ ಸಿಬ್ಬಂದಿಯನ್ನು ಅವರು ಪ್ರಶಂಸಿಸಿದರು.ಕಾರ್ಯಕ್ರಮದ ವೇದಿಕೆಯಲ್ಲಿ ನಿರ್ದೇಶಕರು ಹಾಗೂ ಸಂಚಾಲಕರಾದ ಫಾ. ವಿನೋದ್ ಮಸ್ಕರೇನಸ್ ಹಾಗೂ ಮಕ್ಕಳ ಪ್ರತಿನಿಧಿಯಾಗಿ ಸಂಮ್ರಾನ್ ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ವಿಶೇಷ ಶಿಕ್ಷಕಿಯರು, ಸಹ ಶಿಕ್ಷಕರು, ಫಿಸಿಯೋ ಥೆರಪಿಸ್ಟ್, ಸ್ಪೀಚ್ ಥೆರಪಿಸ್ಟ್, ಡ್ರೈವರ್ ನವರು ಹಾಗೂ ಆಯಾನವರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ದಿವ್ಯ ರವರು ಸ್ವಾಗತ ಕೋರಿದ್ದು, ನಿರೂಪಣೆ ನಡೆಸಿ, ಅಂತಿಮವಾಗಿ ಧನ್ಯವಾದಗಳನ್ನು ಸಲ್ಲಿಸಿದರು.ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ಸಮಾಜದಲ್ಲಿ ಆಟಿಸಂ ಬಗ್ಗೆ ಅರಿವು ಮೂಡಿಸುವುದರೊಂದಿಗೆ, ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ, ವಿಶೇಷ ಚೇತನ ಮಕ್ಕಳಿಗೆ ಸಮಾನ ಅವಕಾಶಗಳನ್ನು ಒದಗಿಸುವಲ್ಲಿ ಸಹಾಯಕವಾಗುತ್ತವೆ.

LEAVE A REPLY

Please enter your comment!
Please enter your name here