






ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಮಠಾಧೀಶರು ಮಹಾಮಂಡಲೇಶ್ವರ 1008ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಇವರ ನೇತೃತ್ವದಲ್ಲಿ ದೇವರಗುಡ್ಡೆ ಆದಿ ಪಜಿರಡ್ಕ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ, ಸನ್ಯಾಸಿ ಪಂಜುರ್ಲಿ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವದ ನೇಮೋತ್ಸವ ಮಾ. 29ರಂದು ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪ್ರಾರ್ಥನೆ, ಪುಣ್ಯಾಹ, ವಾಸ್ತು ಪೂಜೆ, ವಾಸ್ತು ಹೋಮ, ದಿಕ್ಪಾಲ ಬಲಿ, ಶ್ರೀ ಸನ್ಯಾಸಿ ಪಂಜುರ್ಲಿ ಸ್ಥಾನದಲ್ಲಿ ವಾಸ್ತು ರಾಕ್ಷಘ, ಮದ್ಯಾಹ್ನ ಪ್ರಸನ್ನ ಪೂಜೆ, ಅನ್ನಸಂತರ್ಪಣೆ ನಡೆಯಿತು.



ರಾತ್ರಿ ಮಠದಿಂದ ಮೆರವಣಿಗೆಯೊಂದಿಗೆ ಭಂಡಾರ ಆಗಮನ ಬಳಿಕ ಸನ್ಯಾಸಿ ಪಂಜುರ್ಲಿ ಮತ್ತು ಕಲ್ಲುರ್ಟಿ ಪಂಜುರ್ಲಿ ನೇಮೋತ್ಸವ ಜರಗಿತು. ಕಾರ್ಯಕ್ರಮದಲ್ಲಿ ಮಠದ ಟ್ರಷ್ಟಿ ಕಂಕನಾಡಿ ಗರೋಡಿ ಅಧ್ಯಕ್ಷ ಚಿತ್ತಾರಂಜನ್, ಧರ್ಮಸ್ಥಳದ ಬಿ.ಭುಜಬಲಿ, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ,ಮಂಗಳೂರು ಕಾರ್ಪೋರೇಟರ್ ಕಿರಣ್ ಕೋಡಿಕಲ್, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನಾದ ಅಧ್ಯಕ್ಷ ಸಂಪತ್ ಬಿ.ಸುವರ್ಣ, ಹಿರಿಯ ವಾಹನ ನೀರಿಕ್ಷಕ ಚರಣ್ ಕೆ., ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಕೋಶಾಧಿಕಾರಿ ಪ್ರಶಾಂತ್ ಕೊಕ್ರಾಡಿ, ಬಿ ಎಸ್ ಎನ್ ಎಲ್ ನಿವೃತ್ತ ಎಸ್ ಡಿ ಇ ಅಣ್ಣಿ ಪೂಜಾರಿ,ಶ್ರೀ ರಾಮ ಕ್ಷೇತ್ರ ಸಮಿತಿ ಮಹಿಳಾ ಸಮಿತಿ ಸಂಚಾಲಕಿ ಸುಜಾತಾ ಅಣ್ಣಿ ಪೂಜಾರಿ, ಸುಲೋಚನಾ ಚಿತ್ತ ರಂಜನ್, ಮಂಗಳೂರು ಎಂ. ಪಿ. ಸಿಲ್ಕ್ಸ್ ಮಾಲಕ ಎಂ. ಪಿ. ದಿನೇಶ್, ಕಂಕನಾಡಿ ಗರಡಿ ಟ್ರಷ್ಟಿ ಸೂರ್ಯನಾರಾಯಣ, ಗುರುದೇವ ಮಠದ ಟಷ್ಟಿ ತುಕಾರಾಮ ಸಾಲಿಯಾನ್ ಆರ್ಲ, ಕೃಷ್ಣಪ್ಪ ಗುಡಿಗಾರ, ಶ್ರೀ ರಾಮ ಕ್ಷೇತ್ರ ರಿಲೀಜಿಯಸ್ ಟ್ರಸ್ಟ್ ಟ್ರಷ್ಟಿ ರವೀಂದ್ರ ಪೂಜಾರಿ ಆರ್ಲ, ಆದಿ ಪಜಿರಡ್ಕ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಸುನಿಲ್ ಕನ್ಯಾಡಿ, ಶ್ರೀ ರಾಮ ಕ್ಷೇತ್ರ ಬೆಳಾಲು ಗ್ರಾಮ ಸಮಿತಿ ಅಧ್ಯಕ್ಷ ಜಾರಪ್ಪ ಪೂಜಾರಿ ಬೆಳಾಲು, ಕ್ಷೇತ್ರದ ಅರ್ಚಕರು, ಸಿಬ್ಬಂದಿ ವರ್ಗ, ರಥ ಬೀದಿ ವ್ಯಾಪಾರಸ್ಥರು, ಊರ ಪರ ಊರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.









