







ನಡ : ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವರುದ್ರ ದೇವರ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಮಾ.28ರಿಂದ ಏ.1ರ ವರೆಗೆ ನಡೆಯುವ ವರ್ಷಾವಧಿ ಜಾತ್ರೆಗೆ ಮಾ. 28ರಂದು ಧ್ವಜಾರೋಹಣದೊಂದಿಗೆ ಚಾಲನೆ ದೊರೆಯಿತು.
ಪೂರ್ವಾಹ್ನ ಗಂಟೆ 9-15ರಿಂದ ಗಣಪತಿ ಹೋಮ, ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಸತೀಶ್ಚಂದ್ರ ಸೂರ್ಯಗುತ್ತು,ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜಶೇಖರ್ ಅಜ್ರಿ ಮುನಿರಾಜ್ ಅಜ್ರಿ , ವೈಶಾಕ್ ಬಲ್ಲಾಳ್, ಪ್ರಧಾನ ಅರ್ಚಕ ಪದ್ಮನಾಭ ತಂತ್ರಿ, ದೇವಸ್ಥಾನದ ವ್ಯವಸ್ಥಾಪಕ ಪ್ರಸಾದ್, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ್ದು ದೇವರ ಗಂಧ ಪ್ರಸಾದ ಸ್ವೀಕರಿಸಿದರು.


ಮಾ.29ನೇ ಆದಿತ್ಯವಾರ.ಮಧ್ಯಾಹ್ನ ಗಂಟೆ 12.30ರಿಂದ ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆಸಂಜೆ ಗಂಟೆ 6ರಿಂದಸುರ್ಯಗುತ್ತು ಮನೆಯಿಂದ ದೈವಗಳ ಭಂಡಾರ ಹೊರಡುವುದು.ರಾತ್ರಿ ಗಂಟೆ 8.00ರಿಂದಉತ್ಸವ ಹೊರಟು ವಸಂತಕಟ್ಟೆ ಪೂಜೆ, ಮಹಾಪೂಜೆ, ಮಾ.30ನೇ ಸೋಮವಾರ ಪೂರ್ವಾಹ್ನ ಗಂಟೆ 7.00ರಿಂದ ಸೊಡರಬಲಿ ಉತ್ಸವ ಮಧ್ಯಾಹ್ನ 12.30ರಿಂದ ಮಹಾಪೂಜೆ, ಅನ್ನಸಂತರ್ಪಣೆ ದಿ| ಎಚ್. ಲಾಲ್ ಚಂದ್ರ ಹೆಗ್ಡೆ, ದಿ. ಶ್ರೀಮತಿ ರಾಜಾವತಿ ಅಮ್ಮ, ದಿ. ಶ್ರೀಮತಿ ಭಾರತಿ ಆರ್. ಅವರ ಸ್ಮರಣಾರ್ಥ, ಸೂರ್ಯ ಬಿ. ರಾಜಶೇಖರ, ಮಕ್ಕಳು ಮತ್ತು ಮೊಮ್ಮಕ್ಕಳು ಮತ್ತು ಕುಟುಂಬ ಇವರಿಂದ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ ಗಂಟೆ 8ರಿಂದಉತ್ಸವ ಹೊರಟು ಕೆರೆಕಟ್ಟೆ ಪೂಜೆ, ಮಹಾಪೂಜೆ
ಮಾ. 31ನೇ ಮಂಗಳವಾರ ಪೂರ್ವಾಹ್ನ ಗಂಟೆ 8.45ರಿಂದದರ್ಶನಬಲಿ ಉತ್ಸವಮಧ್ಯಾಹ್ನ ಗಂಟೆ 12.30ರಿಂದಮಹಾಪೂಜೆಮಧ್ಯಾಹ್ನ ಗಂಟೆ 1ರಿಂದಪ್ರಸಾದ ವಿತರಣೆ, ಅನ್ನಸಂತರ್ಪಣೆರಾತ್ರಿ ಗಂಟೆ 8ರಿಂದಉತ್ಸವ, ಪುಷ್ಪ ರಥೋತ್ಸವ, ನೃತ್ಯಬಲಿ ಉತ್ಸವ, ರಥಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಶಯನೋತ್ಸವಏ.1ರಂದುಪೂರ್ವಾಹ್ನ ಗಂಟೆ 9ರಿಂದಕವಾಟೋದ್ಘಾಟನೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಸಂಜೆ ಗಂಟೆ 6ಕ್ಕೆಯಾತ್ರಾಹೋಮ, ಅವಭ್ರ ತ ಸ್ನಾನಕ್ಕೆ ಹೊರಡುವುದು.ರಾತ್ರಿ ಗಂಟೆ 10.30ಕ್ಕೆ ಧ್ವಜಾವರೋಹಣರಾತ್ರಿ 11ರಿಂದ ದೈವಗಳ ನೇಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಮಾ.29ರಂದುರಾತ್ರಿ ಗಂಟೆ 9.30ರಿಂದ ಕುಸಲ್ದರಸೆ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು ಅಭಿನಯಿಸಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ|| ದೇವದಾಸ್ ಕಾಪಿಕಾಡ್ ರಚಿಸಿ, ನಟಿಸಿ ನಿರ್ದೇಶಿಸಿರುವ ತುಳು ಹಾಸ್ಯಮಯ ನಾಟಕ*”ಪುದರ್ ದೀತಿಜಿ!” ಮಾ. 30ರಂದುರಾತ್ರಿ ಗಂಟೆ 9.30ರಿಂದ “ಅಭಿನಯ ಕಲಾವಿದರು” ಉಡುಪಿ ಇವರಿಂದ ವಿಕ್ರಮ್ ಮಂಚಿ ರಚಿಸಿರುವ ಅಭಿನಯ ರತ್ನ ದಿನೇಶ್ ಅತ್ತಾವರ ನಿರ್ದೇಶಿಸಿರುವ ಕುತೂಹಲಭರಿತ ಹಾಸ್ಯಮಯ ನಾಟಕ*”ಶಾಂಭವಿ” ಮಾ.31ರಾತ್ರಿ ಗಂಟೆ 11.00ರಿಂದ “ಸಂಗಮ ಕಲಾವಿದರು” ಉಜಿರೆ ಇವರಿಂದ ರಾಜೇಶ್ ಆಚಾರ್ಯ ಸವಣಾಲು ರಚಿಸಿ, ಗಿರೀಶ್ ಹೊಳ್ಳ ನಿರ್ದೇಶಿಸಿರುವ ತುಳು ಸಾಂಸಾರಿಕ ಹಾಸ್ಯಮಯ ನಾಟಕ”ಮಾಸ್ಟ್ರು ಮನಿಪುಜೆರ್” ಪ್ರದರ್ಶನಗೊಳ್ಳಲಿದೆ.









