ಶ್ರೀ ಸದಾಶಿವ ರುದ್ರ ಸುರ್ಯ ದೇವಸ್ಥಾನದಲ್ಲಿ ಭಜನಾ ಮಂಡಳಿ ಉದ್ಘಾಟನೆ

0


ಶ್ರೀ ಸದಾಶಿವ ರುದ್ರ ಸುರ್ಯ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತರಾಮಯ್ಯ ದೀಪ ಬೆಳಗಿಸಿ ಶ್ರೀ ಸದಾಶಿವ ರುದ್ರ ಭಜನಾ ಮಂಡಳಿಯನ್ನು ಉದ್ಘಾಟಿಸಿದರು.

ಆಡಳಿತ ಮುಕ್ತೇಸರ ಸತೀಶ್ಚಂದ್ರ ಸುರ್ಯಗುತ್ತು ಮುಂದಿನ ದಿನಗಳಲ್ಲಿ ಈ ಭಜನಾ ಮಂಡಳಿಯ ಮುಖಾಂತರ ನಿರಂತರ ಭಜನಾ ಸೇವೆ ನಡೆಯಲು ದೇವರ ಅನುಗ್ರಹವಿರಲಿ ಎಂದು ಶುಭ ಹಾರೈಸಿದರು.

ಭಜನಾ ಮಂಡಳಿಯ ಎಲ್ಲಾ ಮಕ್ಕಳಿಗೆ,ಪೋಷಕರಿಗೆ ಶಾಲು ಹಾಕಿ ಗೌರವಿಸಿದರು. ದೇವಸ್ಥಾನದ ಅಧ್ಯಕ್ಷ ರಾಜಶೇಖರ್ ಅಜ್ರಿ,ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ತಿನ ಗೌರವ ಸಲಹೆಗಾರು,ಕುಣಿತ ಭಜನಾ ಗುರು ನಾಗೇಶ್ ಬಿ ನೆರಿಯ ಭಜನಾ ಮಂಡಳಿಯ ಮಕ್ಕಳು ಹಾಗೂ ಪೋಷಕರಿಗೆ ಸಮಗ್ರ ಮಾಹಿತಿಗಳನ್ನು ನೀಡಿದರು.

ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ಪ್ರಾಸ್ತಾವಿಕವಾಗಿ ಮಾತನಾಡಿದರು.ಆಡಳಿತ ಮಂಡಳಿಯ ಸದಸ್ಯರಾದ ಮುನಿರಾಜ್ ಅಜ್ರಿ,ಸಂಗ್ರಾವತ್ ಸಂಪತ್ ಕುಮಾರ್ ಜೈನ್, ಅಶ್ವತ್ ಭಟ್, ಗಣೇಶ್ ಭಟ್ ಹಾಗೂ ದೇವಸ್ಥಾನದ ಮ್ಯಾನೇಜರ್ ಪ್ರಸಾದ್ ಭಜನಾ ಸಂಚಾಲಕರಾದ ಉಷಾ ಹಾಗೂ ಊರಿನ ಹಿರಿಯರಾದ ತಿಮ್ಮಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಸುನೀತಾ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ವಂದಿಸಿದರು.

LEAVE A REPLY

Please enter your comment!
Please enter your name here