






ಬೆಳ್ತಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮಾ.10ರಂದು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿರೀಕ್ಷಿತ ದಾಳಿ ನಡೆಸಿ ವಶಪಡಿಸಿಕೊಳ್ಳಲಾದ 4,150 ಲೀಟರ್ ಡೀಸೆಲ್ ಅನ್ನು ಮಾ.27 ರಂದು ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮೊದಲಿಯಾರ್ ಎಂಬಲ್ಲಿ ಜಗದೀಶ್ ಎಂಬವರ ಮನೆಯ ವಠಾರದಲ್ಲಿ ಬಹಿರಂಗ ಹರಾಜು ನಡೆಯಿತು.


ಒಟ್ಟು 7 ಮಂದಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು ಇದರಲ್ಲಿ ಪುತ್ತೂರು ತಾಲೂಕಿನ ಹಿರೆಬಂಡಾಡಿ ನಿವಾಸಿ ನಾರಾಯಣ ಗೌಡ ಎಂಬವರು ಪ್ರತಿ ಲೀಟರ್ ಗೆ 60 ರೂಪಾಯಿಂತೆ ಒಟ್ಟು 3755 ಲೀಟರ್ ಡಿಸೇಲ್ 2,35,800 ರೂಪಾಯಿಗೆ ಹರಾಜಿನಲ್ಲಿ ಪಡೆದುಕೊಂಡಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಬೆಳ್ತಂಗಡಿ ಆಹಾರ ಇಲಾಖೆಯ ಆಹಾರ ಶಿರಸ್ತೇದಾರ ಸಂತೋಷ್ ಜಿ ಮತ್ತು ಆಹಾರ ನಿರೀಕ್ಷಕ ವಿಶ್ವ.ಕೆ , ಆಹಾರ ಇಲಾಖೆಯ ಸಿಬ್ಬಂದಿ ಹರೀಶ್.ಕೆ ಉಪ್ಪಿನಂಗಡಿ ಸಬ್ ಇನ್ಸ್‌ಪೆಕ್ಟರ್ ಸುತೇಶ್ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.









