






ಬೆಳ್ತಂಗಡಿ: ಬೆಳ್ತಂಗಡಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವಸ್ಥಾಪಕರಾಗಿದ್ದು ಮಾ. 31 ರಂದು ಸೇವಾ ನಿವೃತ್ತಿ ಹೊಂದಲಿರುವ ಕೆ. ಗಿರಿಧರ ಇವರಿಗೆ ಬೀಳ್ಕೊಡುಗೆ ಸಮಾರಂಭ ಮಾ. 27 ರಂದು ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಆಗಮಿಸಿ ನಿವೃತ್ತರನ್ನು ಗೌರವಿಸಿ ಶುಭ ಹಾರೈಸಿದರು.ಬ್ಯಾಂಕಿನ ಆಡಳಿತಾಧಿಕಾರಿ ಎಸ್. ಎಂ. ರಘು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಉಪ ನಿರ್ದೇಶಕ ರಮೇಶ್, ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ದಿಲೀಪ್, ಜಿಲ್ಲಾ ಮಾಜಿ ನಿರ್ದೇಶಕ ರಾಜಶೇಖರ್ ಜೈನ್, ಚಿಕ್ಕಮಗಳೂರು ಜಿಲ್ಲಾ ವ್ಯವಸ್ಥಾಪಕ ಪುಟ್ಟರಾಜು, ಬ್ಯಾಂಕಿನ ಮಾಜಿ ಅಧ್ಯಕ್ಷ ಎಂ. ಈಶ್ವರ ಭಟ್, ನಿಕಟ ಪೂರ್ವ ಅಧ್ಯಕ್ಷ ಸೋಮನಾಥ ಬಂಗೇರ ಭಾಗವಹಿಸಿ ನಿವೃತ್ತರಿಗೆ ಶುಭ ಕೋರಿದರು.


ಬ್ಯಾಂಕಿನ ಮಾಜಿ ವ್ಯವಸ್ಥಾಕಿ ಪ್ರೇಮಾ, ಬೆಳ್ತಂಗಡಿ ಪ್ರಾಥಮಿಕ ಸಹಕಾರ ಸಂಘದ ವ್ಯವಸ್ಥಾಪಕ ಪ್ರಸಾದ್, ಬ್ಯಾಂಕಿನ ಮಾಜಿ ಅಧ್ಯಕ್ಷರುಗಳು, ಮಾಜಿ ನಿರ್ದೇಶಕರು, ಮಾಜಿ ಸಿಬ್ಬಂದಿಗಳು, ಬ್ಯಾಂಕಿನ ಹಾಲಿ ಸಿಬ್ಬಂದಿ ವರ್ಗದವರು ನಿವೃತ ಗಿರಿಧರ ಮತ್ತು ಪತ್ನಿ ಹರಿಣಾಕ್ಷಿ ಇವರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಗ್ರಾಹಕರು, ಅಭಿಮಾನಿಗಳು ಹಾಜರಿದ್ದರು.
ಬ್ಯಾಂಕಿನ ಸಿಬ್ಬಂದಿಗಳಾದ ಪ್ರಮೀಳಾ ಪ್ರಸಾದ್ ಮತ್ತು ಅಶ್ವಿನಿ ಪ್ರಾರ್ಥನೆ ಗೈದರು ಸಿಬ್ಬಂದಿ ರೋಬರ್ಟ್ ರಾಕೇಶ್ ಸ್ವಾಗತಿಸಿ, ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.ಶ್ರೀಕಾಂತ್ ವಂದಿಸಿದರು.ಇತರ ಎಲ್ಲಾ ಸಿಬ್ಬಂದಿಗಳು ಸಹಕರಿಸಿದರು.









