ವಲಯ ಉಪಾಧ್ಯಕ್ಷರ ಮೊದಲ ಅಧಿಕೃತ ಭೇಟಿ ; ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

0

ಜೆಸಿಐ ಕೊಕ್ಕಡ ಕಪಿಲಾ ಘಟಕದ ಮಾರ್ಚ್ ತಿಂಗಳ ಸಾಮಾನ್ಯ ಸಭೆಯು ಹಾಗೂ ವಲಯ ಉಪಾಧ್ಯಕ್ಷರ ಮೊದಲ ಅಧಿಕೃತ ಭೇಟಿ ಮಾರ್ಚ್ 25 ರಂದು ಕೊಕ್ಕಡದ ಎಜುನೆಸ್ಟ್ ಅಕಾಡೆಮಿ ಕೇಂದ್ರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ರಿತೇಶ್ ಎಂ. ಸ್ಟ್ರೆಲ್ಲಾ ಅವರು ವಹಿಸಿದರು. ವಲಯ ಉಪಾಧ್ಯಕ್ಷರಾದ ಕಾಶೀನಾಥ್ ಗೋಗಟೆ ಅವರಿಂದ ಘಟಕ ಅಭಿವೃದ್ಧಿ ಮತ್ತು ಆಡಳಿತ ನಿರ್ವಹಣೆ ತರಬೇತಿ ನಡೆಯಿತು. ವಲಯ ಉಪಾಧ್ಯಕ್ಷರು ಮಾತನಾಡಿ ಸಮಾಜದ ಒಳಿತಿಗಾಗಿ ಸುಸ್ಥಿರ ಪರಿಹಾರ ಯೋಜನೆ ಹಾಗೂ ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ಕಲ್ಪಿಸುವ ಕಾಬೀಲ್ ಯೋಜನೆ ಜಾರಿಗೊಳಿಸಲು ಸಲಹೆ ನೀಡಿದರು.

ಕೊಕ್ಕಡ ಕಪಿಲಾ ಘಟಕವು 10% ಬೆಳವಣಿಗೆಯನ್ನು ದಾಖಲಿಸಿದ್ದು, ಇದಕ್ಕಾಗಿ ಘಟಕದ ಅಧ್ಯಕ್ಷರನ್ನು ಅಭಿನಂದಿಸಿದರು. ಮುಂಬರುವ ವಲಯ ಮಟ್ಟದಲ್ಲಿ ಪುತ್ತೂರಿನಲ್ಲಿ ನಡೆಯುವ ಸಿ.ಎ.ಪಿ.ಪಿ. ಹಾಗೂ ಕಾಪುವಿನಲ್ಲಿ ನಡೆಯುವ ಕಡಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಣಯಿಸಲಾಯಿತು. ಇದೇ ಸಂದರ್ಭದಲ್ಲಿ ಫಲ್ಗುಣಿ ಪ್ರಾಂತ್ಯದ ಸದಸ್ಯತ್ವದ ಬೆಳವಣಿಗೆಯಲ್ಲಿ ಧನಾತ್ಮಕ ಸಾಧನೆಗಾಗಿ ವಲಯ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.

ಜೆಸಿ ವಾಣಿ ಹಾಗೂ ಧ್ಯೇಯ ವಾಕ್ಯವನ್ನು ದೀಪಾ ವಿ. ಅವರು ವಾಚಿಸಿದರು. ಮಾರ್ಚ್ ತಿಂಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ ಜಸ್ವಂತ್ ಪಿರೇರಾ, ವಿಯೋನ್ ಸುವಾರಿಸ್, ಪ್ರಜ್ವಲ್ ಲೋಬೊ, ಜೋಸೆಫ್ ಪಿರೇರಾ ಮತ್ತು ಕೆ. ಶ್ರೀಧರ ರಾವ್ ಅವರಿಗೆ ಶುಭಾಶಯವನ್ನು ಸಲ್ಲಿಸಲಾಯಿತು. ತರಬೇತಿ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಡಾ. ಶೋಭಾ ಪಿ‌., ಲೇಡಿ ಜೆಸಿ ಅಧ್ಯಕ್ಷರಾದ ರೇಶ್ಮಿ ಡಿಸೋಜ, ಜೆಸಿಂತಾ ಡಿಸೋಜ, ಧನುಷ್ ಕುಮಾರ್ ಜೈನ್, ವಿಕ್ಟರ್ ಸುವಾರಿಸ್, ಸಂತೋಷ್ ಜೈನ್, ಚಂದನಾ ಜೈನ್ ಹಾಗೂ ದಕ್ಷಾ ಜೈನ್ ಅವರು ಭಾಗವಹಿಸಿದರು. ಕಾರ್ಯದರ್ಶಿಗಳಾದ ಜೋಯಲ್ ಪಿರೇರಾ ಅವರು ವಂದಿಸಿದರು.

LEAVE A REPLY

Please enter your comment!
Please enter your name here