






ನೆರಿಯ: 2025 26ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಆಡಳಿತ ಅಧಿಕಾರಿ ಜೋಸೆಫ್ ಪಿ ಎಸ್ ಅಧ್ಯಕ್ಷತೆಯಲ್ಲಿ 24ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಪೋಷಣ ಅಭಿಯಾನದ ಸಹಾಯಕ ನಿರ್ದೇಶಕ ರಾಜೇಂದ್ರ ಕೃಷ್ಣ ಭಾಗವಹಿಸಿದ್ದರು.ನೆರಿಯ ಗ್ರಾಮದಲ್ಲಿ ಹಿಂದೂ ರುದ್ರ ಭೂಮಿ ನಿರ್ಮಾಣವಾಗದ ಬಗ್ಗೆ ತಾರಾನಾಥ ಇವರು ಪ್ರಶ್ನೆಗೆ ಅದಕ್ಕೆ ಉತ್ತರಿಸಿದ ಆಡಳಿತ ಅಧಿಕಾರಿ ಜೋಸೆಫ್ ಪಿ ಎಸ್ ರುದ್ರ ಭೂಮಿಯ ಅರ್ಜಿ ಕಳೆದ ಜೂನ್ ತಿಂಗಳಲಿ ಎ ಸಿ ಅವರ ಕಚೇರಿಗೆ ತಲುಪಿದ ಅರ್ಜಿಯನ್ನು ಹಿಂದೆ ಕಳಿಸಿದ್ದಾರೆ. ಆನ್ಲೈನ್ ಮೂಲಕ ಅರ್ಜಿ ಅರ್ಜಿ ನೀಡಲು ಸೂಚನೆಯ ಮೇರೆಗೆ ಬೆಳ್ತಂಗಡಿ ಹೋಗಿ ಪ್ರಹ್ಲಾದ್ ಅವರನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಈಗಾಗಲೇ ಕೆಲಸ ಮಾಡಿದ್ದೇನೆ ಎರಡು ತಿಂಗಳ ಒಳಗೆ ಆರ್ಟಿಸಿಯಲ್ಲಿ ತಿದ್ದುಪಡಿ ಮಾಡುವ ಕೆಲಸವನ್ನು ಮಾಡುತ್ತೇವೆ ಹಾಗೂ ಸಮಸ್ಯೆ ಬಗೆಹರಿಯುವ ವರೆಗೆ ತಾತ್ಕಾಲಿಕವಾಗಿ ಸಂಚಾರಿ ರುದ್ರಭೂಮಿ ರೋಟರಿಯ ಮೂಲಕ ಕಲ್ಪಿಸಿ ಕೊಡುತ್ತೇವೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ತಾತ್ಕಾಲಿಕವಾಗಿ ಕಟ್ಟಡ ನಿರ್ಮಾಣ ಮಾಡಲು ಅನುದಾನವನ್ನು ಕೇಳಿದ್ದೇವೆ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ರುದ್ರ ಭೂಮಿ ಆಗುವ ಹಾಗೆ ನನ್ನ ಪ್ರಯತ್ನ ಯಾವತ್ತು ಇದೆ ತಿಳಿಸಿದರು.
ಮಾಜಿ ಗ್ರಾಮ ಪಂಚಾಯತ್ ಸದಸ್ಯ ಮೊಹಮ್ಮದ್ ಅವರು ಬಲಿಪಾಯ ಪ್ರದೇಶದಲ್ಲಿ ಹಳೆಯ ವಿದ್ಯುತ್ ತಂತಿಯನ್ನು ಬದಲಾಯಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು ಹಾಗೂ ಬಾಬುಗೌಡ ಪರ್ಪಲ ಕಾಟಾಜೆಯಲ್ಲಿ ಟಿ ಸಿ ಯ ಸಮಸ್ಯೆ ಬಗ್ಗೆ ತಿಳಿಸಿದರು. ಪುಲ್ಲಾಜೆ ಪರಿಸರದಲ್ಲಿ ಟಿಸಿಯಾಗಿ ನಾಲ್ಕು ವರ್ಷ ಕಳೆದರೂ ವಿದ್ಯುತ್ ಸಂಪರ್ಕ ಸಮರ್ಪಕವಾಗಿಲ್ಲ ಎಂದು ಸಂದೀಪ್ ಸ್ತಾಪಿಸಿದರು ಇದಕ್ಕೆ ಉತ್ತರಿಸಿದ ಮೆಸ್ಕಾಂ ಜೆ ಇ ವಿದ್ಯುತ್ ತಂತಿಯನ್ನು ಬದಲಾಯಿಸಿಕೊಳ್ಳುತ್ತೇವೆ ಕಾಟಾಜೆ ಟಿ ಸಿ ಬಗ್ಗೆ ಲೈನ್ ಮ್ಯಾನ್ ನಲ್ಲಿ ವಿಚಾರಿಸಿ ಕ್ರಮ ಕೈಗೊಳ್ಳುತ್ತೇನೆ, ಪುಲ್ಲಾಜೆ ವಿದ್ಯುತ್ ಲೈನ್ ಮಾಡುವಾಗ ಕಾಂಟ್ರಾಕ್ಟ್ ನವರು ವಿದ್ಯುತ್ ಕಂಬವನ್ನು ಸಮರ್ಪಕವಾಗಿ ಕಾಮಗಾರಿ ಮಾಡಿಲ್ಲ ಮರದ ಕೊಂಬೆಗಳು ವಿದ್ಯುತ್ ಲೈನಿಗೆ ತಾಗಿಕೊಂಡಿದ್ದು ಮರ ತೆರವು ಗೊಳಿಸಿ ಸರಿಪಡಿಸುತ್ತೇವೆ ಎಂದು ತಿಳಿಸಿದರು.


ನೆರಿಯ ಗ್ರಾಮದಲ್ಲಿ ಹಲವು ಎಸ್ಟೇಟ್ ಗಳಿದ್ದು ಅವರಲ್ಲಿ ಬಾಂಗ್ಲಾದೇಶ ಹಾಗೂ ಹಲವು ಪ್ರದೇಶಗಳಿಂದ ಬಂದ ಕಾರ್ಮಿಕರು ಇಲ್ಲಿದ್ದಾರೆ ಅವರನ್ನು ಪರಿಶೀಲನೆ ಮಾಡಬೇಕು ಎಂದು ಸಂದೀಪ್ ಪ್ರಸ್ಥಾಪಿಸಿದರು ಗಾಂಜಾದಂತಹ ಅಮಲು ಪದಾರ್ಥಗಳು ವಿತರಣೆ ಯಾಗುವ ಬಗ್ಗೆ ಮಾಹಿತಿಗಳು ಕೇಳಿ ಬರ್ತಾ ಇದೆ ಎಂದು ಪಿ ಮೊಹಮ್ಮದ್ ರವರು ಪ್ರಶ್ನೆ ಇಟ್ಟರು ಇದ್ದಕೆ ಉತ್ತರಿಸಿದ ಧರ್ಮಸ್ಥಳ ಪೊಲೀಸ್ ಅಂತಹ ಮಾಹಿತಿಗಳಿದ್ದಲ್ಲಿ ನಮಗೆ ತಿಳಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ತಿಳಿಸಿದರು.
ನೆರಿಯ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ವಿವಿಧ ನೇಮಕಾತಿ ಆಗಿದ್ದು ಹುದ್ದೆ ಭರ್ತಿ ಮಾಡುವಂತೆ ಗ್ರಾಮಸ್ಥರು ಪ್ರಶ್ನಿಸಿದರು ಇದಕ್ಕೆ ಉತ್ತರಿಸಿದ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಖಾಲಿ ಇದ್ದ ಹುದ್ದೆಯನ್ನು ಭರ್ತಿ ಮಾಡಲು ಇಲಾಖೆಗೆ ಸೂಚನೆ ನೀಡಿದ್ದೇವೆ ಎಂದರು. ತನ್ನ ಮಗಳಿಗೆ ಅಂಗವಿಕಲ ವೇತನ ಖಾತೆಗೆ ಜಮಾ ಆಗದಿರುವ ಬಗ್ಗೆ ಜಾನ್ ಪ್ರಸ್ತಾಪಿಸಿದರು ಅದಕ್ಕೆ ಉತ್ತರಿಸಿದ ಮಕ್ಕಳ ಮತ್ತು ಕಲ್ಲಿನ ಇಲಾಖೆಯ ಅಧಿಕಾರಿ ಸಂಬಂಧ ಪಟ್ಟ ಅಧಿಕಾರಿಯ ಜೊತೆ ಮಾತನಾಡಿ ನಿಮ್ಮನು ಸಂಪರ್ಕಿಸುತ್ತೇನೆ ಎಂದು ತಿಳಿಸಿದರು.
ಮಕ್ಕಳ ಮತ್ತು ಕಲ್ಯಾಣ ಇಲಾಖೆ ಪಶು ಸಂಗೋಪನೆ ಇಲಾಖೆ ಆರೋಗ್ಯ ಇಲಾಖೆ ಕಂದಾಯ ಇಲಾಖೆ ಮೆಸ್ಕಾಂ ಇಲಾಖೆ ಪೊಲೀಸ್ ಇಲಾಖೆ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಹಾಲಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿ ಮಧುಮಾಲ ಹಾಗೂ ಮೀನಾಕ್ಷಿ ವರದಿ ಮಂಡಿಸಿದ್ದರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮಾ ಸ್ವಾಗತಿಸಿ ವಂದಿಸಿದರು.









