






ಶ್ರೀ ಮಹಾಗಣಪತಿ ಭಜನಾ ಮಂಡಳಿ(ರಿ.), ಕುದ್ರಡ್ಕ ಇದರ ಏಕಾಹ ಭಜನೆ ಮತ್ತು ಭಜನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಮಾ.24 ರಂದು ಶ್ರೀ ಮಹಾಗಣಪತಿ ಭಜನಾ ಮಂದಿರ ಕುದ್ರಡ್ಕದಲ್ಲಿ ನೆರವೇರಿತು.


ಮುಖ್ಯ ಅತಿಥಿಗಳಾದ ಸಮಾಜ ಕಾರ್ಯಕರ್ತೆ ಕಲ್ಪನಾ ಉಜಿರೆ ಹಾಗೂ ಜಿಲ್ಲಾ ಭಜನಾ ತರಬೇತುದಾರ ಸಂದೇಶ್ ಮದ್ದಡ್ಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಮಚ್ಚಿನ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ಬಳ್ಳಮಂಜ, ಭಜನಾ ಮಂಡಳಿಯ ಗೌರವಾಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ, ಅಧ್ಯಕ್ಷ ವಸಂತ ಮಡಕ್ಕಿಲ, ಕಾರ್ಯದರ್ಶಿ ಸಂಪತ್ ಪಿಜಕೂಡಂಗೆ, ಭಜನೋತ್ಸವ ಸಮಿತಿಯ ಅಧ್ಯಕ್ಷ ಮೋಹನಂದ ಮಾನ್ಯ, ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಪ್ರಮೀಳಾ, ಶಿವರಾಮ ಆಚಾರ್ಯ ಕುದ್ರಡ್ಕ ಮತ್ತು ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.









