ಬೆಳ್ತಂಗಡಿ ತಾಲೂಕಿನ ಪರಿಶಿಷ್ಟ ಜಾತಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯದ ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಅನುದಾನವನ್ನು ಬಿಡುಗಡೆಗೊಳಿಸಿರುವುದಾಗಿ ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.

ಈ ಅನುದಾನದಡಿ ಕೆಳಕಂಡ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ.

ಕುಕ್ಕಳ ಗ್ರಾಮದ ಹಟ್ಟತ್ತೋಡಿಯಿಂದ ಕೆಂಪರಿಗೆಯವರೆಗೆ ರಸ್ತೆ– ರೂ.25.00 ಲಕ್ಷಮಾಲಾಡಿ ಗ್ರಾಮದ ಪುರಿಯದಿಂದ ಕುರಿಯೋಡಿ ವರೆಗೆ ರಸ್ತೆ– ರೂ.25.00 ಲಕ್ಷವೇಣೂರು ಗ್ರಾಮದ ಮೂಡ್ಲಾ ಕ್ರಾಸ್‌ನಿಂದ ನತ್ಯಟ್ಟವರೆಗೆ ರಸ್ತೆ – ರೂ.25.00 ಲಕ್ಷನಾರಾವಿ ಗ್ರಾಮದ ದುಗಲಾಯಿ ಗುಡ್ಡೆ ರಸ್ತೆ – ರೂ.25.00 ಲಕ್ಷಕಳೆಂಜ ಗ್ರಾಮದ ಬಂಡೇರಿಯಿಂದ ಬೇಂಗದಗಂಡಿವರೆಗೆ ರಸ್ತೆ – ರೂ.25.00 ಲಕ್ಷನ್ಯಾಯತರ್ಪು ಗ್ರಾಮದ ಗೋವಿಂದೂರು ರಿಂದ ಕಣಿಯೂರು ಗ್ರಾಮದ ಕಾಪಿನಡ್ಕ -ಪೆರ್ದಡ್ಕ ರಸ್ತೆ – ರೂ.50.00 ಲಕ್ಷಪಟ್ರಮೆ ಗ್ರಾಮದ ಮಣಿಯೇರು ರಸ್ತೆ – ರೂ.15.00 ಲಕ್ಷಪಟ್ರಮೆ ಗ್ರಾಮದ ಓಟಕಜೆ ರಸ್ತೆ – ರೂ.10.00 ಲಕ್ಷ.ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಸಮುದಾಯದ ಜನರಿಗೆ ಉತ್ತಮ ರಸ್ತೆ ಸೌಲಭ್ಯ ಲಭ್ಯವಾಗಲಿದ್ದು, ದೈನಂದಿನ ಸಂಚಾರ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.ಈ ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರಕ್ಕೆ ಶಾಸಕ ಹರೀಶ್ ಪೂಂಜ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here