ಬೆಳಾಲು ಮಾಯ ಮಹಾದೇವ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ

0

ಬೆಳಾಲು : ಮಾಯ ಶ್ರೀ ಮಹಾದೇವ ದೇವಸ್ಥಾನದಲ್ಲಿ ಮಾ. 24 ರಂದು ವಾರ್ಷಿಕ ಪ್ರತಿಷ್ಠಾಮಹೋತ್ಸವ ಅಲಂಬಾಡಿ ಪದ್ಮನಾಭಾ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಬೆಳಗ್ಗೆ ಗಣಪತಿ ಹೋಮ, ದೇವರಿಗೆ ಕಲಾಶಾಭಿಷೇಕ, ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು. ಇದೆ ಸಂದರ್ಭದಲ್ಲಿ ಈ ವರ್ಷ ನಡೆದ ವಾರ್ಷಿಕ ಜಾತ್ರೆಯ ಲೆಕ್ಕ ಪತ್ರ ಸಭೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್. ಪದ್ಮ ಗೌಡರ ಅಧ್ಯಕ್ಷತೆಯಲ್ಲಿ ಜರಗಿತು. ಬೆಳಾಲು ಸಹಕಾರ ಸಂಘದ ನಿವೃತ್ತ ಸಿಇಓ ಪಿ. ರುಕ್ಮಯ್ಯ ಗೌಡ ಜಾತ್ರೆಯ ಜಮಾ ಖರ್ಚು ವಿವಿರ ನೀಡಿದರು.

ಮಾಯ ಗುತ್ತು ಪುಷ್ಪದಂತ ಜೈನ್, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಅರ್ಚಕ ಕೇಶವ ರಾಮಯಾಜಿ, ಸುರೇಶ್ ಭಟ್ ಪರಂಗಾಜೆ, ದಾಮೋದರ ಗೌಡ ಸುರುಳಿ, ದಯಾನಂದ ಪಿ. ಬೆಳಾಲು, ದಿನೇಶ್ ಎಂ. ಕೆ., ದೇವಸ್ಥಾನದ ವ್ಯವ ಸ್ಥಾಪಕ ಶೇಖರ ಗೌಡ ಕೊಲ್ಲಿಮಾರು, ವಿವಿಧ ಉಪ ಸಮಿತಿಯ ಸಂಚಾಲಕರು, ಸದಸ್ಯರು ಗ್ರಾಮಸ್ಥರು ಹಾಜರಿದ್ದರು. ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here