






ಬೆಳ್ತಂಗಡಿ;. ತುಳುನಾಡಿನ ಸತ್ಯನಾಪುರದ ಸತ್ಯದ ಸಿರಿಗಳ ಮೂಲ ಅಲಡೆ ಕ್ಷೇತ್ರ ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಮಾ.31 ರಿಂದ ಏಪ್ರಿಲ್ 4 ರವರೆಗೆ ವಾರ್ಷಿಕ ಸಿರಿ ಜಾತ್ರೆ ನಡೆಯಲಿದೆ ಎಂದು ನಿಡಿಗಲ್ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಕೆ.ಎಂ.ನಾಗೇಶ್ ಕುಮಾರ್ ಹೇಳಿದರು.
ಬೆಳ್ತಂಗಡಿಯ ಯುವ ಕಾಂಗ್ರೆಸ್ ಬ್ಲಾಕ್ ಕಚೇರಿಯಲ್ಲಿ ಮಾ.24 ರಂದು ಪತ್ರಿಕಾಗೋಷ್ಟಿ ನಡೆಸಿದ ಅವರು, ದೇವಸ್ಥಾನಕ್ಕೆ, ನಾಡಿನಾದ್ಯಂತ ಹೆಚ್ಚಿನ ಭಕ್ತರಿದ್ದಾರೆ, ಪ್ರತಿ ವರ್ಷದಂತೆ ಈ ವರ್ಷವು ಕೂಡ ಸುಗ್ಗಿ, ಹುಣ್ಣುಮೆಗೆ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ ಆಯನೊತ್ರವಾದಿಗಳು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಜಾತ್ರೋತ್ಸವ ಸಂಧರ್ಭದಲ್ಲಿ ಶ್ರೀ ದೇವರಿಗೆ ಬಲಿ ಉತ್ಸವ, ಕುಮಾರದರ್ಶನ, ಅಬ್ಬಗೆ ದಾರಗರ ಚನ್ನೆಮಣೆ ಆಟ, ಕ್ಷೇತ್ರದ ಪ್ರಧಾನ ದೈವ ಸೇಮಕಲ್ಲ ಪಂಜುರ್ಲಿ ದೈವಕ್ಕೆ ನೇಮೋತ್ಸವ, ವಾರ್ಷಿಕ ನಡಾಲ್ ಸಿರಿ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ ಎಂದು ಹೇಳಿದರು.
ನಾಡಿನಾದ್ಯಂತ ಸಾವಿರಾರು ಭಕ್ತರು ಈ ಸಂಧರ್ಭದಲ್ಲಿ ಸಿರಿ ಜಾತ್ರೋತ್ಸವಕ್ಕೆ ಆಗಮಿಸಿ ಪುನೀತರಾಗುತ್ತಾರೆ, ಮುಖ್ಯ ಗರ್ಭಗುಡಿಯಲ್ಲಿ ಪ್ರಧಾನವಾಗಿ ಸ್ವಯಂಭೂ ಲಿಂಗಶ್ರೀ ಲೋಕನಾಥೇಶ್ವರ (ಬೆರ್ಮರು) ದೇವರು, ಪ್ರದಾನ ದೇವರ ಎಡ ಬಾಗದಲ್ಲಿ ಶ್ರೀ ದೇವಿ (ಸತ್ತೋದ ಸಿರಿ) ಹಾಗೂ ಬಲಬಾಗದಲ್ಲಿ ಸುಬ್ರಹ್ಮಣ್ಯ (ಕುಮಾರ) ಹಾಗೂ ಗಣಪತಿ, ದುರ್ಗಾದೇವಿಯ ಗುಡಿಗಳಿವೆ, ದೇವಸ್ಥಾನದ ಮುಂಬಾಗ ಶ್ರೀ ದೇವರ ಭಂಟ ತುಳುನಾಡಿನ ಕಾರಣಿಕದ ದೈವ ಸೇಮಕಲ್ಲ ಪಂಜುರ್ಲಿ ಗುಡಿ ಇದೆ ಈ ದೈವಕ್ಕೆ ವರ್ಷಂಪ್ರತಿ ಜಾತ್ರಾ ಸಂದರ್ಭದಲ್ಲಿ, ನೇಮೋತ್ಸವ ನಡೆಯುತ್ತದೆ, ದೇವಸ್ಥಾನದ ಬಲಬಾಗದಲ್ಲಿ ನಾಗಬ್ರಹ್ಮರ ಸನ್ನಿದಿ ಇದೆ ಇಲ್ಲಿ ಜಾತ್ರಾ ಸಂಧರ್ಭದಲ್ಲಿ ಶ್ರೀ ನಾಗಬ್ರಹ್ಮರಿಗೆ ನಾಗದರ್ಶನ ಸೇವೆ ಕೂಡ ನಡೆಯುತ್ತದೆ.
ತುಳುನಾಡಿನ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಆ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಹರಕೆ ರೂಪದಲ್ಲಿ ವಿಶೇಷವಾಗಿ ಇಲ್ಲಿನ ಶಕ್ತಿಗಳಿಗೆ ಬಲಿವಾಡು ಸಾಮಗ್ರಿಗಳಾದ ಹುರುಳಿ, ಅಕ್ಕಿ, ತೆಂಗಿನಕಾಯಿ, ಹಿಂಗಾರ, ಎಳ್ಳಣ್ಣೆ. ಶಿಯಾಳ ಹಾಗೂ ಪುಂಡಿ ಪಣವೂ (ಹರಕೆ ಕಾಣಿಕ ) ಅರ್ಪಿಸುತ್ತಾರೆ.


ವಿಶೇಷವಾಗಿ ಪವಿತ್ರವಾದ ನೇತ್ರಾವತಿ ನದಿಯ ದಡದಲ್ಲಿಯೇ ಇರುವಂತಹ ಅಪರೂಪದ ಕ್ಷೇತ್ರವಾದ ಇಲ್ಲಿಗೆ ನಾಡಿನ ಎಲ್ಲಾ ಭಕ್ತರು ಆಗಮಿಸಿ ಈ ಅಪರೂಪದ ಕಾರಣಿಕ ಕ್ಷೇತ್ರದ ಶಕ್ತಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕೇಳಿಕೊಂಡರು.
ಕಾರ್ಯಕ್ರಮದ ವಿವರಗಳು, ಮಾ. 31ರಂದು ಬೆಳಿಗ್ಗೆ 06 ಗಂಟೆಯಿಂದ ದೇವತಾ ಕಾರ್ಯಗಳು ರಾತ್ರಿ ದೈವಗಳ ನೇಮೋತ್ಸವ ಏ.01ರಂದು ಬೆಳಿಗ್ಗೆ ಶ್ರೀ ದೇವರ ಉತ್ಸವ, ಭಜನಾ ಸಂಕಿರ್ತನೆ ಹಾಗೂ ನಡೆಯಲಿದೆ. ರಾತ್ರಿ ಅಬ್ಬಗ-ದಾರಗರ ಚೆನ್ನೆಮಣೆ ಆಟ, ಪ್ರಧಾನದೈವ ನೇಮೋತ್ಸವ ಏ. 02 ರಂದು ಬೆಳಿಗ್ಗೆ ನಾಗದರ್ಶನ ಸೇವೆ ದೇವರ ಉತ್ಸವ ರಾತ್ರಿ 7 ರಿಂದ ವಾರ್ಷಿಕ ನಡ್ವಾಲ್ ಸಿರಿಜಾತ್ರೆ ರಾತ್ರಿ 8ರಿಂದವ ಧಾರ್ಮಿಕ ಸಭೆ ರಾತ್ರಿ 10.00 ಗಂಟೆಗೆ ಚೈತನ್ಯ ಕಲಾವಿದರು ಬೈಲೂರು ಇವರಿಂದ ರಾಘು ಮಾಸ್ಟ್ರು ನಾಟಕ ನಡೆಯಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ ವ್ಯವಸ್ಥಾಪನ ಸಮಿತಿ ಪ್ರಧಾನ ಸಂಚಾಲಕ ಪಾಂಡುರಂಗ ಮರಾಠಿ, ಜಾತ್ರೋತ್ಸವ ಸಮಿತಿ ಸದಸ್ಯ ಪ್ರಸಾದ್ ಕುಮಾರ್ ಎಳನೀರು, ಸಂತೋಷ್ ಗೌಡ ಹಾಗೂ ಯಶೋಧರ ಗೌಡ, ಉಪಸ್ಥಿತರಿದ್ದರು.









