ಕೊಕ್ಕಡ: ವಸರಿಕಟ್ಟೆ ಬಳಿ ಕಾಡಾನೆ ಪ್ರತ್ಯಕ್ಷ – ವಿದ್ಯಾರ್ಥಿನಿ, ಬೈಕ್ ಸವಾರರು ತೀವ್ರ ಆತಂಕ

0

ಕೊಕ್ಕಡ: ಸಮೀಪ ಪಟ್ಟೂರಿನಿಂದ ಸೌತಡ್ಕ ಕಡೆಗೆ ಸಾಗುವ ವಸರಿಕಟ್ಟೆ ಪ್ರದೇಶದಲ್ಲಿ ಕಾಡಾನೆ ಹಠಾತ್ ಪ್ರತ್ಯಕ್ಷವಾದ ಘಟನೆ ಮಾ.23ರಂದು ಸಂಜೆ ಸುಮಾರು 6.30ರ ವೇಳೆಗೆ ನಡೆದಿದೆ.

ಕಾಲೇಜಿನಿಂದ ಬಸ್‌ನಲ್ಲಿ ಇಳಿದು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಹಾಗೂ ಬೈಕ್ ಸವಾರನಿಗೆ ರಸ್ತೆಯಲ್ಲಿ ಏಕಾಏಕಿ ಕಾಡಾನೆ ಎದುರಾದ ಪರಿಣಾಮ ಇಬ್ಬರೂ ಕೆಲಕಾಲ ಭೀತಿಗೊಳಗಾದರು. ಸ್ಥಳೀಯರ ತ್ವರಿತ ಸಹಾಯದಿಂದ ಅವರು ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಘಟನೆಯ ಬಳಿಕ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಮಾಹಿತಿ ಪಡೆದ ಉಪ್ಪಿನಂಗಡಿ ವಲಯದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರಿಗೆ ಜಾಗ್ರತೆ ವಹಿಸುವಂತೆ ಸೂಚನೆ ನೀಡಿದ್ದು, ವಿಶೇಷವಾಗಿ ಆ ಮಾರ್ಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದಿರಬೇಕೆಂದು ಮನವಿ ಮಾಡಿದೆ. ಕಳೆದ 2-3 ದಿನಗಳಿಂದ ಇದೇ ಪ್ರದೇಶದಲ್ಲಿ ಕಾಡಾನೆ ಸಂಚರಿಸುತ್ತಿರುವುದು ಕಂಡುಬಂದಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.ಈ ಹಿನ್ನೆಲೆ ಅರಣ್ಯ ಇಲಾಖೆ ಗಸ್ತು ಹೆಚ್ಚಿಸಿ ಕಾಡಾನೆಯ ಚಲನವಲನವನ್ನು ನಿಗಾದಲ್ಲಿ ಇಟ್ಟುಕೊಂಡಿದೆ.

LEAVE A REPLY

Please enter your comment!
Please enter your name here