







ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯಲ್ಲಿ ಮಾ 22ರಂದು ಆಳ್ವಾಸ್ ನುಡಿಸಿರಿ ವಿರಾಸತ್ ಬೆಳ್ತಂಗಡಿ ಘಟಕದ ವತಿಯಿಂದ 500ಕ್ಕೂ ಅಧಿಕ ವಿದ್ಯಾರ್ಥಿಗಳಿಂದ “ಆಳ್ವಾಸ್ ಸಾಂಸ್ಕೃತಿಕ ವೈಭವ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ ಮಕ್ಕಳಿಗೆ ಓದಿನ ಜತೆಗೆ ಸಾಂಸ್ಕೃತಿಕ ವಿಚಾರಗಳಿಗೂ ಹೆಚ್ಚಿನ ಒತ್ತು ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಕಲೆಯನ್ನು ಗುರುತಿಸಿ ಎತ್ತರಕ್ಕೇರಿಸಬಹುದು. ಈ ವಿಚಾರದಲ್ಲಿ ಡಾ.ಮೋಹನ್ ಆಳ್ವ ಅವರು ಮಹತ್ವದ ಪಾತ್ರ ವಹಿಸಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ ವಿದ್ಯಾರ್ಥಿಗಳ ಪ್ರೌಢಿಮೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಉತ್ತಮ ಅಡಿಪಾಯ ನಿರ್ಮಿಸುತ್ತಿವೆ. ಕೀರ್ತಿ ಶೇಷರಾದ ವಿಜಯರಾಘವ ಪಡುವೆಟ್ನಾಯರು, ಪ್ರೊ.ಎಸ್.ಪ್ರಭಾಕರ್ ಮತ್ತು ಡಾ.ಯಶೋವರ್ಮ ಅವರ ಮಾರ್ಗದರ್ಶನದಲ್ಲಿ ಬೆಳೆದಿರುವ ಉಜಿರೆ ತಾಲೂಕಿನ “ಸಾಂಸ್ಕೃತಿಕ ನಗರ”ವೆಂಬ ಹಿರಿಮೆಗೆ ಪಾತ್ರವಾಗಿ ಎಲ್ಲ ಸಾಂಸ್ಕೃತಿಕ ಕಲಾಭಿರುಚಿಗಳಿಗೆ ಆಶ್ರಯತಾಣವಾಗಿದೆ ಎಂದು ಅಭಿನಂದಿಸಿದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ ಜಾಗತಿಕವಾಗಿ 17 ಆಳ್ವಾಸ್ ನುಡಿಸಿರಿ, 30 ಆಳ್ವಾಸ್ ವಿ ರಾಸತ್ ಕಾರ್ಯಕ್ರಮಗಳು ನಾಡಿನೆಲ್ಲೆಡೆ ಮೂಡಿಬಂದಿವೆ. 88 ಘಟಕಗಳು ದೇಶ-ವಿದೇಶ ಗಳಲ್ಲಿ ಕಾರ್ಯನಿರ್ವಹಿಸುತ್ತಿವೆ . ನಮ್ಮದು ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶವೇ ಹೊರತು ಯಾರೊಂದಿಗೂ ಸ್ಪರ್ಧೆಯಲ್ಲ. ಕಲೆಯ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಹೊಸ ರೂಪಗಳು ಮೂಡಿ ಬರಬೇಕು ಎಂದರು.
ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮಾತನಾಡಿ ಬೆಳ್ತಂಗಡಿ ಘಟಕದಿಂದ ತಾಲೂಕಿನಲ್ಲಿ ವರ್ಷಕ್ಕೆ ಕನಿಷ್ಠ ಎರಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ರೂಪಿಸಲಾಗಿದೆ ಎಂದರು. ಡಾ!ಮೋಹನ ಆಳ್ವ ಅವರನ್ನು ಗಣ್ಯ ಅತಿಥಿಗಳು ತಾಲೂಕಿನ ಕ ಲಾಭಿಮಾನಿಗಳ ಪರವಾಗಿ ಸನ್ಮಾನಿಸಿ ಗೌರವಿಸಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಶುಭ ಹಾರೈಸಿದರು.ವಿ.ಪ.ಶಾಸಕ ಪ್ರತಾಪ ಸಿಂಹ ನಾಯಕ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ.ಸತೀಶ್ಚಂದ್ರ ಎಸ್., ಅನಿಲ್ ಕುಮಾರ್ ಎಸ್. ಎಸ್., ಪೂರನ್ ವರ್ಮ, ಕೆ. ಮೋಹನ್ ಕುಮಾರ್,ಡಾ.ಎಂ.ಪಿ. ಶ್ರೀನಾಥ್, ಡಾ. ಹರ್ಷ ಸಂಪಿಗೆತ್ತಾಯ,ಮಚ್ಚಿಮಲೆ ಅನಂತ ಭಟ್, ವಸಂತ ಶೆಟ್ಟಿ ಶ್ರದ್ಧಾ, ರವೀಂದ್ರ ಶೆಟ್ಟಿ ಸುರಭಿ , ರಾಜೇಶ್ ಪೈ, ಡಾ. ಪ್ರದೀಪ್ ಆಟಿಕುಕ್ಕೆ, ಅರವಿಂದ ಕಾರಂತ್, ಶ್ರೇಯಾ ಶೆಟ್ಟಿ, ಉಮೇಶ್ ಶೆಟ್ಟಿ, ಅಶ್ವಿನಿ ಎ. ಹೆಬ್ಬಾರ್, ಪ್ರಕಾಶ ನಾರಾಯಣ ರಾವ್,ಡಾ!ಕುಮಾರ ಹೆಗ್ಡೆ ,ಪುಷ್ಪರಾಜ ಶೆಟ್ಟಿ ,ಬಿ.ಕೆ.ಧನಂಜಯ ರಾವ್ ಸೇರಿದಂತೆ ತಾಲೂಕಿನ ಪ್ರಮುಖರು ಉಪಸ್ಥಿತರಿದ್ದರು.
ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಅಂಬರೀಶ ಚಿಪಳೂಣ್ಕರ್ ಕಾರ್ಯಕ್ರಮ ಸಂಘಟಿಸಿದರು. ಉಜಿರೆ ರಥಬೀದಿಯಲ್ಲಿ ಆಯೋಜಿಸಿದ ಬೃಹತ್ ವೇದಿಕೆಯಲ್ಲಿ 3 ಗಂಟೆ ಕಾಲ ನಡೆದ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹಸ್ರಾರು ಕಲಾಭಿಮಾನಿಗಳು ಹೃದ್ಯವಾಗಿ ಆಸ್ವಾದಿಸಿದರು.









