






ಮಂಗಳೂರು: cardiology at doorstep(R) ಪೌಂಡೇಶನ್ ಇದರ ಸ್ಥಾಪಕರಾದ ಪ್ರಖ್ಯಾತ ಹೃದ್ರೋಗ ತಜ್ಞ ಡಾ ಪದ್ಮನಾಭ ಕಾಮತ್ ರವರ ಮಂಗಳೂರಿನಲ್ಲಿರುವ ಕ್ಲಿನಿಕ್ ಗೆ ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ-ನವಶಕ್ತಿ BPL ಕಂಪೆನಿಯ 50 ಇಸಿಜಿ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸಂಸ್ಥೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಕಾರ್ಯವೈಖರಿ ಗಮನಿಸಿ ಶಶಿಧರ್ ಶೆಟ್ಟಿಯವರು ಮುಂದೆಯೂ ಸಹಕಾರ-ಪ್ರೋತ್ಸಾಹ ನೀಡುತ್ತೇನೆ ಎಂದು ತಿಳಿಸಿದ್ದಾರೆ.


cardiology at doorstep(R) ಪೌಂಡೇಶನ್ ನಿಂದ ಗ್ರಾಮೀಣ ಪ್ರದೇಶಕ್ಕೆ,ಮಿಲಿಟರಿ ಗೆ,ಹಾಗೂ ಇನ್ನಿತರ ಪ್ರದೇಶಕ್ಕೆ 1100 ಇಸಿಜಿ ಯಂತ್ರವನ್ನು ನೀಡಲಾಗಿದೆ. ಆದಿತ್ಯ ಎಂಟರ್ ಪ್ರೈಸಸ್ ನ ಮಾಲೀಕ ವಿಜಯ್ ಕುಮಾರ್, CAD ಫೌಂಡೇಶನ್ ನ PRO ಪ್ರದೀಪ್ ನಾಯಕ್ ಉಪಸ್ಥಿತರಿದ್ದರು.









