







ಬೆಳ್ತಂಗಡಿ : ಇತಿಹಾಸ ಪ್ರಸಿದ್ಧ 33ನೇ ವರ್ಷದ ವೇಣೂರು ಪೆರ್ಮುಡ
ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳಕ್ಕೆ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಇಂದು ಬೆಳಿಗ್ಗೆ ಭೇಟಿ ನೀಡಿ ಇತಿಹಾಸ ಪ್ರಸಿದ್ಧ ಕಂಬಳ ಕೀರ್ತಿ ಶೇಷ ಕೆ. ವಸಂತ ಬಂಗೇರ ಕಂಬಳ ಬಹಳ ಅಚ್ಚು ಕಟ್ಟಾಗಿ ನಡೆಸಿ ಕೊಂಡು ಬರುತ್ತಿದ್ದರು. ಇದೀಗ ರಕ್ಷಿತ್ ಶಿವರಾಂ ಮುಂದುವರಿಸಿಕೊಂಡು ಹೋಗುತ್ತಿರುವುದು ಬಹಳ ಖುಷಿ ಯಾಗುತ್ತಿದೆ ಎಂದರು.


ಕಂಬಳ ಸಮಿತಿ ಗೌರವಧ್ಯಕ್ಷ ರಕ್ಷಿತ್ ಶಿವರಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯನ್, ,ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಹೆಚ್ ಕೋಟ್ಯಾನ್,ಕಂಬಳ ಸಮಿತಿ ಕಾರ್ಯಾಧ್ಯಕ್ಷ ಶೇಖರ್ ಕುಕ್ಕೆಡಿ, ರಾಜಶೇಖರ್ ಶೆಟ್ಟಿ,
ಸಂಚಾಲಕ ಪ್ರವೀಣ್ ಫೆರ್ನಾಂಡಿಸ್, ಉಪಾಧ್ಯಕ್ಷ ಗೋಪಾಲ ಪೂಜಾರಿ,ರವೀಂದ್ರ ಪೂಜಾರಿ ಬಳಂಜ, ಕರುಣಾಕರ ಸಾಲ್ಯಾನ್, ಸ್ಟಿವನ್ ಮೋನಿಸ್, ಕಾರ್ಯದರ್ಶಿ ಭರತ್ ರಾಜ್ ಕೋಶಾಧಿಕಾರಿ ಅಶೋಕ್ ಪಾಣೂರು ಮೊದಲಾದವರು ಉಪಸ್ಥಿತರಿದ್ದರು









