ಭಾಗವತ ಮೋಹನ ಬೈಪಾಡಿತ್ತಾಯರಿಗೆ ತೆಂಕಬೈಲು ಪ್ರಶಸ್ತಿ ಪುರಸ್ಕಾರ

0

ಉಜಿರೆ: ಕಾಸರಗೋಡು ಜಿಲ್ಲೆಯ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಿಂದ ಕೊಡ ಮಾಡುವ ತೆಂಕಬೈಲು ಪ್ರಶಸ್ತಿಯನ್ನು ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ಗುರು, ಭಾಗವತ ಮೋಹನ ಬೈಪಾಡಿತ್ತಾಯರಿಗೆ ಮಾ 15 ರಂದು ಉಜಿರೆಯ ಓಡಲದ ಅವರ ಸ್ವಗೃಹ “ಶ್ರೇಯ” ದಲ್ಲಿ ಪ್ರದಾನಿಸಲಾಯಿತು.

ಪೆರ್ಲದ ಪಡ್ರೆ ಚಂದು ನಾಟ್ಯ ತರಬೇತಿ ಕೇಂದ್ರದ ಅಧ್ಯಕ್ಷ, ನಾಟ್ಯ ಗುರು ಸಬ್ಬಣಕೋಡಿ ರಾಮ್ ಭಟ್ ಪ್ರಸ್ತಾಪಿಸಿ ,ಸ್ವಾಗತಿಸಿದರು. ಪ್ರಶಸ್ತಿಯ ಪ್ರಾಯೋಜಕರಾದ ಭಾಗವತ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು, ಹಿಮ್ಮೇಳ ಕಲಾವಿದ ಚಂದ್ರಶೇಖರ ಭಟ್ ಕೊಂಕಣಾಜೆ, ಉಪನ್ಯಾಸಕ ಹಾಗೂ ಕಲಾವಿದ ಜಯಪ್ರಕಾಶ ನಾಕೂರು, ಹವ್ಯಾಸಿ ಭಾಗವತ ವೆಂಕಟ್ರಮಣ ರಾವ್ ಬನ್ನೆಂಗಳ, ಉಪನ್ಯಾಸಕ ಪ್ರೊ. ಜಿ. ಪಿ ಹೆಗಡೆ ಮೊದಲಾದವರು ಮೋಹನ ಬೈಪಾಡಿತ್ತಾಯರನ್ನು ಅಭಿನಂದಿಸಿ ಮಾತನಾಡಿದರು.

ಹವ್ಯಾಸಿ ಕಲಾವಿದ ವಿಶ್ವನಾಥ ಕೊಯ್ಯೂರು ಪ್ರಶಸ್ತಿ ಪತ್ರ ವಾಚಿಸಿದರು. ಪ್ರಶಸ್ತಿ ಪುರಸ್ಕೃತ ಮೋಹನ ಬೈಪಾಡಿತ್ತಾಯರೊಂದಿಗೆ ಪತ್ನಿ ಲಲಿತಾ ಅವರನ್ನೂ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೈಪಾಡಿತ್ತಾಯರು ಭಾಗವತರಾದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಅವರೊಂದಿಗಿನ ಆತ್ಮೀಯ ಒಡನಾಟವನ್ನು ಸ್ಮರಿಸಿಕೊಂಡು ಪೆರ್ಲ ಕೇಂದ್ರದ ಕಲಾ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯಕ್ಷಭಾರತಿ ಕನ್ಯಾಡಿಯ ಸಂಚಾಲಕ, ಭಾಗವತ ಮಹೇಶ ಕನ್ಯಾಡಿ ವಂದಿಸಿದರು. ಶಿಕ್ಷಕ ಗೋವರ್ಧನ ಎಮ್. ಮೂಡಬಿದಿರೆ ಮತ್ತು ಹಿಮ್ಮೇಳ ಕಲಾವಿದ ನಾರಾಯಣ ಶರ್ಮ ಉಪಸ್ಥಿತರಿದ್ದು ಸಹಕರಿಸಿದರು

LEAVE A REPLY

Please enter your comment!
Please enter your name here