ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಕೋ ಆ ಸೊಸೈಟಿ ಪಂಗನಾಮ ಪ್ರಕರಣ-ಸಿಐಡಿ ಅಧಿಕಾರಿಗಳಿಂದ ಮಹಜರು ಶುರು-ದಾಖಲೆಗಳ ಪರಿಶೀಲನೆ

0

ಬೆಳ್ತಂಗಡಿ :ಇಲ್ಲಿನ ಸಂತೆಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ) ಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಅಂದಾಜು 40 ಕೋಟಿಗೂ ಅಧಿಕ ಹಣ ದುರುಪಯೋಗ ಮಾಡಿರುವ ಪ್ರಕರಣ ಸಂಬಂಧ ಮಾರ್ಚ್ 17 ರಂದು ಸಿಐಡಿ ಅಧಿಕಾರಿಗಳು ಮಹಜರಿನ ಜೊತೆ ತನಿಖೆ ಶುರುಗೈದಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಂಚನೆಗೊಳಗಾದ ಠೇವಣಿದಾರ ದಯಾನಂದ ನಾಯಕ್ ಸೇರಿ ಒಟ್ಟು 13 ಜನ ನೊಂದವರು 22-05-2025 ರಂದು ಸೊಸೈಟಿಯ 14 ಜನರ ವಿರುದ್ಧ ಈ ಪ್ರಕರಣ ಮಂಗಳೂರು ಸೆನ್ ಪೊಲೀಸ್ ಠಾಣೆಗೆ ನಂತರ ಸಿಐಡಿಗೆ ಹಸ್ತಾಂತರವಾಗಿ ತನಿಖೆ ಶುರುವಾಗಿದೆ.ಆರೋಪಿಗಳಲ್ಲಿ ಓರ್ವನಾಗಿರುವ ಸೊಸೈಟಿಯ ಸಿಇಓ ಚಂದ್ರಕಾಂತ್ ಮತ್ತು ದೂರುದಾರ ದಯಾನಂದ್ ನಾಯಕ್ ಸಮ್ಮುಖದಲ್ಲೇ ಅಧಿಕಾರಿಗಳು ದಾಖಲೆಪತ್ರಗಳ ತಲಾಶ್ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here