ಬೆಳ್ತಂಗಡಿ ಕಲ್ಲಗುಡ್ಡೆ ರಸ್ತೆಯಲ್ಲಿ ಕೊಳಚೆ ನೀರಿನ ಸಿಂಚನ ಅಧಿಕಾರಿ ವರ್ಗ ಸ್ಪಂದನೆ

0

ಬೆಳ್ತಂಗಡಿ : ಇಲ್ಲಿಯ ಬೆಳ್ತಂಗಡಿಯಿಂದ ಸವಣಾಲ್ ಹೋಗುವ ರಸ್ತೆ ಕಲ್ಲಗುಡ್ಡೆಯಲ್ಲಿ ಖಾಸಗಿ ಮನೆಯ ಕೊಳಚೆ ನೀರು ರಸ್ತೆಗೆ ಬಿಡಲಾಗಿದ್ದು ಪ್ರತಿದಿನ ವಾಹನ ಹೋಕರಿಗೆ ಕೊಳಚೆ ನೀರಿನ ಸಿಂಚನ ಭಾಗ್ಯ ದೊರೆಯಲಿದೆ ಎಂದು ಪ್ರಕಟ ವಾದ ಹಿನ್ನಲೆ ಕೂಡಲೇ ಅಧಿಕಾರಿ ವರ್ಗ ಸ್ಪಂದನೆ ನೀಡಿದ್ದಾರೆ. ಕಲ್ಲಗುಡ್ಡೆಯಲ್ಲಿ ಹಲವು ಮನೆಗಳಿದ್ದು ಕೊಳವೆ ಭಾವಿಯ ನೀರು ಸರಬರಾಜು ನಲ್ಲಿ ಪೈಪ್ ತುಂಡರಿಸಿ ನೀರು ಚರಂಡಿಗೆ ಬಂದು ರಸ್ತೆಯಲ್ಲಿ ಹರಿಯುತ್ತಿತ್ತು. ಈ ಬಗ್ಗೆ ಕಲ್ಲಗುಡ್ಡೆಯ ರವಿ ಕುಮಾರ್ ಸುಮಾರು 20ದಿವಸ ಮೊದಲೇ ದೂರು ನೀಡಿದ್ದರು ಎಂದು ಸುದ್ದಿ ಪತ್ರಿಕೆಗೆ ತಿಳಿಸಿದ್ದಾರೆ. ಸುದ್ದಿ ಯಲ್ಲಿ ವರದಿ ಪ್ರಕಟ ಗೊಂಡಂತೆ ಕೂಡಲೇ ಅಧಿಕಾರಿ ವರ್ಗ ಸ್ಪಂದಿಸಿ ಸರಿಪಡಿಸಲಾಗಿದೆ ಎಂದು ರಸ್ತೆ ಹೋಕರು ಸಂತೋಷ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here