






ಗುರುವಾಯನಕೆರೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಉಮಾ ಡಿ. ಗೌಡ ಹಟ್ಟತ್ತೋಡಿ ಅವರಿಗೆ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ಸಂಘ, ದಕ್ಷಿಣ ಕನ್ನಡ ವತಿಯಿಂದ ಬೋಧಕರ ವಿಭಾಗದಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಜಿಲ್ಲಾಮಟ್ಟದ “ವಿದ್ಯಾರತ್ನ” ಪ್ರಶಸ್ತಿ ದೊರೆತಿದೆ.



ಅವರು ಪುಂಜಾಲಕಟ್ಟೆ ಹಟ್ಟತ್ತೋಡಿ ನಿವೃತ್ತ ಶಿಕ್ಷಕ ಧರ್ಣಪ್ಪ ಗೌಡರ ಪತ್ನಿ. ಅವರು ಮೂಲತಃ ಸುಬ್ರಹ್ಮಣ್ಯ ಕೈಕಂಬ ನಡುತೋಟ ಕುಟುಂಬದವರು. ಇವರ ಕುಟುಂಬದಲ್ಲಿ 11 ಮಂದಿ ಶಿಕ್ಷಕ ವೃತ್ತಿಯ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.









