






ಬೆಳ್ತಂಗಡಿ : ಇಲ್ಲಿಯ ಬೆಳ್ತಂಗಡಿಯಿಂದ ಸವಣಾಲ್ ಹೋಗುವ ರಸ್ತೆ ಕಲ್ಲಗುಡ್ಡೆಯಲ್ಲಿ ಖಾಸಗಿ ಮನೆಯ ಕೊಳಚೆ ನೀರು ರಸ್ತೆಗೆ ಬಿಡಲಾಗಿದ್ದು ಪ್ರತಿದಿನ ವಾಹನ ಹೋಕರಿಗೆ ಕೊಳಚೆ ನೀರಿನ ಸಿಂಚನ ಭಾಗ್ಯ ದೊರೆಯಲಿದೆ.


ಕಲ್ಲಗುಡ್ಡೆಯಲ್ಲಿ ಹಲವು ಮನೆಗಳಿದ್ದು, ರಸ್ತೆ ಚರಂಡಿ ಇಲ್ಲದೇ ಇರುವುದರಿಂದ ಹಾಗು ಖಾಸಗಿ ಮನೆಯವರು ಇಂಗು ಗುಂಡಿ ರಚಿಸದೆ ನೀರು ರಸ್ತೆಗೆ ಬಿಡಲಾಗಿದೆ. ನೀರು ರಸ್ತೆಗೆ ಬಿಟ್ಟಿದ್ದರಿಂದ ದುರ್ವಾಸನೆಯಿಂದ ಕೂಡಿದೆ ಎಂದು ದಾರಿ ಹೋಕರು ಮತ್ತು ದ್ವಿಚಕ್ರ ವಾಹನ ಚಾಲಕರು ದೂರಿಕೊಂಡಿದ್ದಾರೆ. ಯಾವುದೇ ಕಾರ್ಯಕ್ರಮಕ್ಕೆ ಹೋಗುವ ದ್ವಿಚಕ್ರ ವಾಹನ ಗಾರರ ಎದುರು ಹೋಗುವ ವಾಹಗಳಿಂದ ನೀರು ಸಿಂಚನಗೊಂಡು ಕೆಟ್ಟ ವಾಸನೆ ಬರುವಂತಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿ ಹೋಗುವ ಪರಿಸ್ಥಿತಿ ಎದುರಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುವಂತೆ ಕಾನೂನು ಕ್ರಮ ಜರಗಿಸುವಂತೆ ಕೋರುತ್ತಿದ್ದಾರೆ.









