






ನಿಡ್ಲೆ :ಸತ್ಯನಾರಾಯಣ ಭಜನಾ ಮಂಡಳಿ ನಿರಾಪಾದೆ ಕಳೆಂಜ ಇದರ ವತಿಯಿಂದ ನಗರ ಭಜನಾ ಸೇವೆ ನಡೆಯುತ್ತಿದ್ದು 8ನೇ ದಿನದ ಅಂಗವಾಗಿ ಭಜನಾ ಸೇವೆ ಮಂಡಳಿಯ ಗೌರವಧ್ಯಕ್ಷ ಮಾಲಿಂಗ ಗೌಡ ಇವರ ಮನೆಯಲ್ಲಿ ನೆರವೇರಿತು.



ಭಜನೆಯಲ್ಲಿ ಪಾಲ್ಗೊಂಡ ಎಲ್ಲಾ ಭಜಕರಿಗೆ ಮತ್ತು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನೀಡಿ ಗೌರವಿಸಿದರು. ಈ ಸಂಧರ್ಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ಜನಾರ್ಧನ ಎಂ ಕೆ, ಕಾರ್ಯದರ್ಶಿ ಜಯಂತ ಗೌಡ ಕಾಟ್ಲ ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.










