ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯಲ್ಲಿ 3 ತಿಂಗಳ ಟ್ಯೂಷನ್ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ ) ಗುರುವಾಯನಕೆರೆ ಇದರ ಮಾರ್ಗದರ್ಶನ ದೊಂದಿಗೆ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅವರ ಆಶೀರ್ವಾದದೊಂದಿಗೆ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ 3 ತಿಂಗಳ ಟ್ಯೂಷನ್ ತರಗತಿಯು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷರಾಗಿ ಪ್ರಗತಿ ಬಂಧು ಸ್ವಸಹಾಯ ಸಂಘದ ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ, ಉದ್ಘಾಟಕರಾಗಿ ಉದಯ ಹೆಗ್ಡೆ ಎಸ್ ಡಿ ಎಂ ಸಿ ಗೌರವ ಸದಸ್ಯರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಧರ್ಮಸ್ಟಳ ಯೋಜನೆ ಪ್ರಮುಖ ಪಾತ್ರ ವಹಿಸಿವೆ ಇದರ ಸದುಪಯೋಗ ಪಡೆದು ಕೊಳ್ಳಿ ಎಂದು ತಿಳಿಸಿದರು.

ಒಕ್ಕೂಟದ ವಲಯ ಅಧ್ಯಕ್ಷ ಶೇಖರ್ ಹೆಗ್ಡೆ ವಲಯ ಮೇಲ್ವಿಚಾರಕರು ಹಾಗೂ ತಾಲೂಕ್ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸುಗುಣ ಶೆಟ್ಟಿ. ವಲಯ ಮೇಲ್ವಿಚಾರಕರು ವಿಶಾಲ, ಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲ, ಸೇವಾಪ್ರತಿನಿಧಿ ಹರಿಣಾಕ್ಷಿ ಹಾಗೂ ರೇಷ್ಮಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here