






ಬೆಳ್ತಂಗಡಿ : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಒಳಗೊಂಡ ತುಳುನಾಡಿನ ಕ್ರೀಡೆಗಳಲ್ಲಿ ಕಂಬದಷ್ಟೇ ಮುಂಚೂಣಿಯಲ್ಲಿರುವ ಒಂದು ಕ್ರೀಡೆ ಕೋಳಿ ಅಂಕ ಮುಂದಿನ ದಿನಗಳಲ್ಲಿ ಇಂತಹ ಗ್ರಾಮೀಣ ಆಚರಣೆಗಳನ್ನು ಮುಂದುವರಿಸಲು ಒಟ್ಟಾಗಿ ಹೋರಾಟಕ್ಕೆ ಮಾ. 15 ರಂದು ಬೆಳಿಗ್ಗೆ 9.30ಕ್ಕೆ ಬಂದಾರು ಗ್ರಾಮದ ಪಾಣೆಕಲ್ಲು ಎಂಬಲ್ಲಿ ದ. ಕ. ಜಿಲ್ಲಾ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ವತಿಯಿಂದ ಸಭೆಯನ್ನು ಕರೆಯಲಾಗಿದೆ ಎಂದು ಹಿತ ರಕ್ಷಣಾ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಶಿವಣ್ಣ ಗೌಡ ಹೇಳಿದರು.

ಅವರು ಮಾ. 11ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಈ ನಾಡಿಗೆ ಪ್ರಾಚೀನ ಸಂಪ್ರದಾಯದಂತೆ ದೈವಾರಾಧನೆ, ಯಕ್ಷಗಾನ, ನಾಗಮಂಡಲ, ನವರಾತ್ರಿ ವಿಶೇಷ ಆಚರಣೆಗಳು ಇಲ್ಲಿ ಹಲವಾರು ಪ್ರಾಚೀನ ಕ್ರೀಡೆಗಳಿದ್ದು ಇವುಗಳು ಜಾತ್ರೆ, ನೇಮೋತ್ಸವ, ಕೃಷಿ ಮುಂತಾದ ವಿಚಾರಗಳಿಗೆ ಹೊಂದಿಕೊಂಡಿದೆ.ತುಳುನಾಡಿನ ಕ್ರೀಡೆಗಳಲ್ಲಿ ಕಂಬಳದಷ್ಟೇ ಮುಂಚೂಣಿಯಲ್ಲಿರುವ ಒಂದು ಕ್ರೀಡೆ “ಕೋಳಿ ಅಂಕ”. ಇದನ್ನು ಕ್ರೀಡೆ ಅನ್ನುವುದಕ್ಕಿಂತ ನಂಬಿಕೆ ಅಂತ ನಂಬುವವರೇ ಹೆಚ್ಚು.


ಕೋಳಿ ಅಂಕ ಅನ್ನುವುದು ಪ್ರಾಚೀನ ಕಾಲದಿಂದ ಆಚರಿಸಿಕೊಂಡು ಬಂದಿದ್ದು, ಇಲ್ಲಿಯ ತನಕ ಯಾವುದೇ ತೊಂದರೆಯಾದದ್ದು ಇಲ್ಲ. ಇದು ಅದರದ್ದೇ ಆದ ಚೌಕಟ್ಟಿನಲ್ಲಿ ನಡೆಯುತ್ತದೆ.ಇದು ಇಲ್ಲಿನ ದೈವಾರಾಧನೆ ಪ್ರಮುಖ ಅಂಗ.ಪ್ರಾಚೀನ ಸಂಪ್ರದಾಯದ ಪ್ರಕಾರ ಕೋಳಿ ಅಂಕವು ದೈವಗಳ ನೇಮೋತ್ಸವದ ಮೊದಲು ನಡೆದರೆ, ಇನ್ನು ಕೆಲವು ಕಡೆ ದೈವನರ್ತನದ ಸಂದರ್ಭ ನಡೆಯುತ್ತದೆ, ಮತ್ತೆ ಕೆಲವು ಕಡೆಗಳಲ್ಲಿ ನೇಮೋತ್ಸವ ಮುಗಿದ ನಂತರ ನಡೆಯುತ್ತದೆ. ಹಾಗೆಯೇ ದೈವದ ಗೊನೆಮುಹೂರ್ತದ ನಂತರ ಕೋಳಿಗೂಟ ವಾಡಿಕೆಯಲ್ಲಿ ಇರುತ್ತದೆ.ಇತ್ತೀಚಿನ ದಿನಗಳಲ್ಲಿ ಈ ಕೋಳಿ ಅಂಕಕ್ಕೆ ಜೂಜು ಮಸ್ತಿ ಅನ್ನುವ ಹಣೆಪಟ್ಟಿ ಕಟ್ಟಿ ಸರಕಾರ ಹಾಗೂ ಪೊಲೀಸ್ ಇಲಾಖೆ ನಿರ್ಬಂಧ ಹೇರುವ ಮುಖಾಂತರ ಈ ನಾಡಿನ ಜನತೆಯ ಧಾರ್ಮಿಕ ಭಾವನೆಗೆ ನೋವನ್ನುಂಟು ಮಾಡಿದೆ.
ಅದಲ್ಲದೆ ಈ ಮೊದಲು ಕಂಬಳಕ್ಕೆ ನಿರ್ಬಂಧ ಹೇರಿ ಈಗ ಅದು ಕೂಡ ಸಾಂಪ್ರದಾಯಿಕವಾಗಿ ನಡೆಯುತ್ತಿಲ್ಲ ಅನ್ನುವ ಬೇಸರ ನಾಡಿನ ಜನತೆಗೆ ಇದೆ. ಹಾಗೆ ಇನ್ನು ತೆಂಗಿನಕಾಯಿ ಕುಟ್ಟುವುದೂ ಒಂದು ಸಾಂಪ್ರದಾಯಿಕ ಕ್ರೀಡೆ. ಇದು ವರ್ಷದ ಒಂದು ಶುಭದಿನದಂದು ಆಚರಿಸಲಾಗುತ್ತದೆ ಇದಕ್ಕೂ ಪೊಲೀಸ್ ಕಡಿವಾಣ ಇದೆ.ಆದುದರಿಂದ ಮುಂದಿನ ದಿನಗಳಲ್ಲಿ ಈ ಎಲ್ಲಾ ಆಚರಣೆಗಳನ್ನು ಮುಂದುವರಿಸಲು ನಾವೆಲ್ಲರೂ ಒಂದಾಗಿ ಒಟ್ಟಾಗಿ ಸೇರಲು ಸಂಪ್ರದಾಯಿಕ ಆಚರಣಾ ಹಿತ ರಕ್ಷಣಾ ವೇದಿಕೆ ಮೂಲಕ ಸಭೆ ಕರೆಯಲಾಗಿದೆ.ಈ ಸಂಪ್ರದಾಯ ಉಳಿವಿಗಾಗಿ ಜಿಲ್ಲೆಯ ಎಲ್ಲಾ ಶಾಸಕರುಗಳನ್ನು ಭೇಟಿಯಾಗಿ ಮನವಿ ಮಾಡಲಾಗಿದೆ.
ಇದು ಸರಕಾರ ಮತ್ತು ಇಲಾಖೆಯ ವಿರುದ್ದದ ಹೋರಾಟ ಅಲ್ಲ ತುಳುನಾಡ ಆಚರಣೆ, ಸಂಸ್ಕೃತಿ ಉಳಿವಿಗಾಗಿ ಕಂಬಳ ಮತ್ತು ಇತರ ಶ್ರೀಮಂತರ ಕೂಟ ವಾದರೆ ಕೋಳಿ ಅಂಕ, ತೆಂಗಿನ ಕಾಯಿ ಕಟ್ಟ ಬಡವರ ಕ್ರೀಡೆ ಇದನ್ನು ದೀಪಾವಳಿಯಿಂದ ಮೇ ತಿಂಗಳ ವರೆಗೆ ಜೂಜು ರಹಿತವಾಗಿ ನಡೆಯುತ್ತಿದ್ದು ಇದಕ್ಕೆ ಅವಕಾಶ ನೀಡ ಬೇಕು ಎಂದು ಈ ಹೋರಾಟ ಎಂದು ಹೇಳಿದರು.ಪತ್ರಿಕಾ ಗೋಷ್ಠಿಯಲ್ಲಿ ದ. ಕ. ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಬೆಳಿಯಪ್ಪ ಗೌಡ ತಿಮರ ಗುಡ್ಡೆ, ಜಿಲ್ಲಾ ಸಮಿತಿ ಸದಸ್ಯ ಗೋಪಿನಾಥ ಕಡಬ,ತಾಲೂಕು ಸಮಿತಿ ಮುಖಂಡರಾದ ಶೀನಪ್ಪ ಗೌಡ ಕಡಮ್ಮಾಜೆ, ದಿನೇಶ್ ಬಂದಾರು,









