







ನಾವೂರು :ಸರಕಾರಿ ಪ್ರೌಢ ಶಾಲೆ ಇಲ್ಲಿ ಪೋಷಕ – ಶಿಕ್ಷಕರ ಸಭೆ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಮಾರ್ಚ್ 7 ರಂದು ನಡೆಯಿತು.ಕಾರ್ಯ ಕ್ರಮದಲ್ಲಿ ವೃತ್ತಿ ಮಾರ್ಗ ದರ್ಶನ ನೀಡುವ ಸಲುವಾಗಿ ನಾವೂರು ಮುರ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಖಾದರ್ ಮತ್ತು ಕೊಡುಗೈ ದಾನಿಗಳು ಮಯೂರ ಟೆಕ್ಸ್ಟ್ ಟೈಲ್ಸ್ ಮಾಲಕ ಪದ್ಮನಾಭ, SDMC ಉಪಾಧ್ಯಕ್ಷ ಉಮೇಶ್ ಪ್ರಭು ಹಡೀಲ್, ಶಾಲೆಯ ಹಿತ ಚಿಂತಕ ಡಾ.ಪ್ರದೀಪ್, ಗ್ರಾಮ ಪಂಚಾಯತ್ ಸದಸ್ಯ ಣೇಶ್ ಗೌಡ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಹಾಗೂ ಮುಖ್ಯ ಶಿಕ್ಷಕರು, ಸಹಶೀಕ್ಷಕ ರಾಜೇಂದ್ರ ಭಟ್ ಉಪಸ್ಥಿತರಿದ್ದರು.


ಅಥಿತಿಗಳಾದ ಅಬ್ದುಲ್ ಖಾದರ್ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಭ್ಯಾಸದ ಆಯ್ಕೆಯ ಬಗ್ಗೆ ಮತ್ತು ಮುಂದಿನ ವೃತ್ತಿಗೆ ಉಪಯೋಗವಾಗುವ ಕೋರ್ಸ್, ಆಯ್ಕೆ ಬಗ್ಗೆ, ಮತ್ತು ಎಲ್ಲರೂ ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗುವಾಗುವಂತೆ ಹಲವಾರು ಸಲಹೆ ಸೂಚನೆಗಳನ್ನು ಸವಿ ವಿವರವಾಗಿ ತಿಳಿಸಿದರು.

ಶಾಲೆಗೆ ದೇಣಿಗೆ ನೀಡಿ ದಾನಿಗಳಾಗಿ ಆಗಮಿಸಿದ ಪದ್ಮನಾಭ ಮತ್ತು ವೃತ್ತಿ ಮಾರ್ಗದರ್ಶನ ನೀಡಿದ ಅಬ್ದುಲ್ ಖಾದರ್ ಅವರನ್ನು ಅಭಿನಂದಿಸಲಾಯಿತು ನಿಖಿಲಾ ಸ್ವಾಗತಿಸಿ,ಮೀನಾ ನಿರೂಪಿಸಿ ಜಯಶ್ರೀ ಧನ್ಯವಾದವಿತ್ತರು ಕಾರ್ಯಕ್ರಮಕ್ಕೆ ಸ್ಮಿತಾ ಮತ್ತು ಭವ್ಯ ಪೂರ್ಣ ಸಹಕಾರ ನೀಡಿದರು.









