







ಓಡಿಲ್ನಾಳ ಸ. ಉ. ಪ್ರಾ. ಶಾಲೆ ಓಡಿಲ್ನಾಳ ಮಾ.7ರoದು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ ಮತ್ತು ಪೋಷಕರ ಸಭೆಯನ್ನು ನಡೆಯಿತು.



ಕಾರ್ಯಕ್ರಮ ಸಭಾಧ್ಯಕ್ಷತೆಯನ್ನು ವಹಿಸಿದ ಸಫಾನ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ತಾಲೂಕು ಪಂಚಾಯತ್ ಬೆಳ್ತಂಗಡಿ ಇವರು ಮಾತನಾಡಿ ಮಕ್ಕಳನ್ನು ಮೊಬೈಲಿಂದ ದೂರವಿರಿಸಲು ಪೋಷಕರ ಸಹಕಾರ ಅಗತ್ಯ ಡ್ರಗ್ಸ್ ಧೂಮಪಾನ ಗಳಿಂದ ಎಚ್ಚರ ವಹಿಸಲು ಸಲಹೆ ನೀಡಿದರು ಮುಖ್ಯ ಅತಿಥಿಗಳಾಗಿ ನೋಡಲ್ ಅಧಿಕಾರಿ ರಾಜೀವ ಸಾಲಿಯನ್, ಗ್ರಾಮೀಣ ಉದ್ಯೋಗ ತಾಲೂಕು ಪಂಚಾಯತ್ ಬೆಳ್ತಂಗಡಿ ಇವರು ಉಪಸ್ಥಿತರಿದ್ದು ಪೋಷಕರೊಂದಿಗೆ ಉತ್ತಮ ಸಂವಾದ ಶಾಲೆ ಮತ್ತು ಸಮುದಾಯದಲ್ಲಿ ಪೋಷಕರ ಸಹಭಾಗಿತ್ವ, ವಿವಿಧ ಅನುದಾನಗಳ ಸದ್ಬಳಕೆ ಇತ್ಯಾದಿ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಲೀಲಾವತಿ ವರದಿ ಮಂಡಿಸಿದರು ಉಷಾ ಲತಾ ಸಹಕರಿಸಿದರು ವೇದಿಕೆಯಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸಂತೋಷ್ ಶೆಟ್ಟಿ ಮದ್ದಡ್ಕ, ಉಪಾಧ್ಯಕ್ಷರು ನಸೀಮ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರುಣ್ ಸುಮಿತ್, ಕಾರ್ಯದರ್ಶಿ ಸತೀಶ್ ದೇವಾಡಿಗ ಹಾಗೂ ಮುಖ್ಯ ಶಿಕ್ಷಕಿ ಉಷಾ ಇವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ನಾಡಗೀತೆ ಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ, ಮುಖ್ಯ ಶಿಕ್ಷಕಿ ಅತಿಥಿಗಳನ್ನು ಸ್ವಾಗತಿಸಿದರು. ಜಯರಾಜ ಜೈನ್ ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು ನಯನಾ.ಟಿ ಧನ್ಯವಾದ ನೀಡಿದರು ಸಹಶಿಕ್ಷಕರು, ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿ ವರ್ಗ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು









