







ಕರ್ನಾಟಕ ಮುಸ್ಲಿಮ್ ಜಮಾತ್ ಮದ್ದಡ್ಕ ಯೂನಿಟ್ ಇದರ ಸಾರತ್ಯದಲ್ಲಿ ರಾಜ್ಯ ಸಮಿತಿಯ ಸುತ್ತೋಲೆಯ ಮೇರೆಗೆ ಮಾ.9 ರಂದು ಅಸರ್ ನಮಾಜ್ ಬಳಿಕ ಮದ್ದಡ್ಡ ನೂರುಲ್ ಹುದಾ ಜುಮ್ಮಾ ಮಸ್ಜಿದ್ ನ ದಫನ ಸ್ಥಳದ ಪರಿಸರದಲ್ಲಿ ಕುರ್ ಆನ್ ಪಾರಾಯಣ ಹಾಗೂ ಕೂಟು ಝಿಯಾರತ್ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮದ ನೇತೃತ್ವವನ್ನು ಮದ್ದಡ್ಕ ಜುಮ್ಮಾ ಮಸ್ಜಿದ್ ನ ಖತೀಬರಾದ ಹಾಫಿಳ್ ಮುಈನುದ್ದೀನ್ ರಝಾ ಅಲ್ ಅಮ್ಜದಿ ವಹಿಸಿದ್ದರು.ಖಬರ್ ಜೀವನ ನೆಮ್ಮದಿಯಾಗಬೇಕು ಎಂದರೆ ನಾವು ನಿತ್ಯ ಇದರ ಬಗ್ಗೆ ಚಿಂತಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದ್ದಡ್ಕ ಕೆ ಎಮ್ ಜೆ ಯೂನಿಟ್ ಅಧ್ಯಕ್ಷರಾದ ಅಬ್ಬೋನು ಮದ್ದಡ್ಕ ವಹಿಸಿದ್ದರು.
ನೂರುಲ್ ಹುದಾ ಮಸೀದಿಯ ಅಧ್ಯಕ್ಷರಾದ ಅಶ್ರಫ್ ಚಿಲಿಂಬಿ , ಯಾಕೂಬ್ ಮುಸ್ಲಿಯಾರ್ ಮುಂತಾದ ಗಣ್ಯರು ಭಾಗವಹಿಸಿದ್ದರು. ಎನ್ ಎಸ್ ಉಮ್ಮರ್ ಮದ್ದಡ್ಕ ವಂದಿಸಿದರು. ಎಮ್ ಎಚ್ ಅಬೂಬಕರ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.









