






ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ ಹೆಚ್ಚಾಗುತ್ತಿರುವಾಗಲೇ, ಕ್ಷೇತ್ರದ ಬಗ್ಗೆ ಹೊಸ ಭಕ್ತಿಗೀತೆ ಬಿಡುಗಡೆಗೆ ಸಿದ್ಧವಾಗಿದೆ.
ಜನಾರ್ದನ ದೇವಸ್ಥಾನದ ಆಡಳಿತ ಮೋಕ್ತೇಸರ ಶರತಕೃಷ್ಣ ಪಡ್ವೆಟ್ನಾಯರ ಆಶೀರ್ವಾದ ಹಾಗೂ ವಿಜಯಗೋಪುರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಶಶಿಧರ ಶೆಟ್ಟಿ ಬರೋಡರವರ ಗೌರವ ನಿರ್ಮಾಪಕತ್ವದೊಂದಿಗೆ ಶ್ರೀಜನಾರ್ದನ ಸ್ವಾಮಿ ಕ್ಷೇತ್ರದ ಕುರಿತಾದ “ ಉಜಿರೆಯೊಡೆಯ” ಎಂಬ ನಾಟ್ಯ ಗಾನಾಮೃತ ಭಕ್ತಿಗೀತೆ, ಮಾ.7 ಇಂದು ರಾತ್ರಿ ಸುದರ್ಶನ ಸಭಾ ವೇದಿಕೆಯಲ್ಲಿ ಬಿಡುಗಡೆಗೊಳ್ಳಲಿದೆ.



ಪ್ರಕೃತಿ ಕ್ರಿಯೇಷನ್ ರವರ ಈ ಕಲಾಗುಚ್ಚಕ್ಕೆ ಪಾರ್ಶ್ವನಾಥ ಜೈನ್ ಕಕ್ಯಪದವು ರವರು ಸಾಹಿತ್ಯ ರಚಿಸಿದ್ದು, ಝೀ ಕನ್ನಡ ಸರಿಗಮಪ ಖ್ಯಾತಿಯ ಕ್ಷಿತಿ ರೈ ಧರ್ಮಸ್ಥಳ ಹಾಗೂ ತೌಳವ ಗೌರವ ಪ್ರಶಸ್ತಿ ವಿಜೇತ ವಿಜಯ್ ಶೆಟ್ಟಿ ಮೂಡುಬೆಳ್ಳೆ ಹಾಡಿದ್ದಾರೆ. ಹಾಡಿಗೆ ಗುರುರಾಜ್ ಎಂ ಬಿ ಸಂಗೀತ ಸಂಯೋಜಿಸಿದ್ದು, ವಿದುಷಿ ಚೈತ್ರ ಭಟ್ ಹಾಗೂ ನೃತ್ಯ ವಿಶಾರದೆ ವಿದುಷಿ ಕವಿತಾ ಉಮೇಶ್ ನೃತ್ಯ ಸಂಯೋಜಿಸಿದ್ದಾರೆ.
ಅದೇ ರೀತಿ ಆಶ್ರಯ್ ಉಪಾಧ್ಯರವರು ಚಿತ್ರಿಕರಣ ನಡೆಸಿದ್ದು ವರುಣ್ ಗೌಡ ದೊಂಡೋಲೆ ಅವರ ಸಂಕಲನವಿದೆ. ಉಜಿರೆ ಸಂದೀಪ್ ಕುಮಾರ್ ಅವರ ಈ ವಿಭಿನ್ನ ಪರಿಕಲ್ಪನೆಗೆ ಅಚ್ಯುತ್ ಭಾರದ್ವಾಜ್, ವನಿತಾ ವಿ ಶೆಟ್ಟಿ,ಸುರೇಂದ್ರ ಜೈನ್ ಹಾಗೂ ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ ಗುರಿಪಲ್ಲ ಇದರ ಕುಣಿತ ಭಜಕರ (ಬೇಬಿ ಉಮೇಶ್ ತಂಡ) ಸಹಕಾರವಿದೆ. ಮಾ.7 ರಂದು ರಾತ್ರಿ ಭಕ್ತಿಗೀತೆ ಬಿಡುಗಡೆಯಾಗಲಿದ್ದು ನಂತರ ಸುದ್ದಿ ನ್ಯೂಸ್ ಬೆಳ್ತಂಗಡಿ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ









