






ಬೆಳ್ತಂಗಡಿ : ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಮಾ. 9ರಂದು ಬೆಳಿಗ್ಗೆ ಗಂಟೆ 11ಕ್ಕೆ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥ ಯಾತ್ರೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಲಿದೆ.



ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ, ಉಜಿರೆ ಮಾರ್ಗ ವಾಗಿ ಈ ದಿವ್ಯ ರಥ ಸಂಚರಿಸಲಿದೆ ಧರ್ಮಸ್ಥಳದಲ್ಲಿ ಭವ್ಯ ಸ್ವಾಗತ, ಭಜನೆ, ಸತ್ಸಂಗ, ನೈವೇದ್ಯ, ಮಹಾ ಮಂಗಳಾರತಿ,, ಪ್ರಸಾದ ವಿತರಣೆ ಜರಗಲಿದೆ ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕರ್ನಾಟಕ, ಬೆಳ್ತಂಗಡಿ ಶ್ರೀ ಸತ್ಯಸಾಯಿ ಸೇವಾ ಸಮಿತಿ ಸಂಚಾಲಕರು ತಿಳಿಸಿದ್ದಾರೆ.









