ಮೇಲoತಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಜಾನ್ ಪಿಂಟೊ, ಉಪಾಧ್ಯಕ್ಷರಾಗಿ ನಳಿನಾಕ್ಷಿ ಅವಿರೋಧ ಆಯ್ಕೆ

0


ಮೇಲoತಬೆಟ್ಟು: ಮೇಲoತಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ ಮುಂದಿನ 5ವರ್ಷಕ್ಕೆ ಅವಧಿಗೆ ಆಡಳಿತ ಮಂಡಳಿಗೆ ಮಾ. 4ರಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಸಾಮಾನ್ಯಸ್ಥಾನದಿಂದ ಸ್ಪರ್ದಿಸಿದ್ದ ಜಾನ್ ಪಿಂಟೊ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಮಹಿಳಾ ಮೀಸಲು ಸ್ಥಾನದಿಂದ ಸ್ಪರ್ದಿಸಿದ ನಳಿನಾಕ್ಷಿ ಎನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಸಾಮಾನ್ಯ ಸ್ಥಾನದಿಂದ ಸ್ಪರ್ದಿಸಿದ್ದ ಧರ್ನಪ್ಪ ಸಫಲ್ಯ, ಚಂದ್ರರಾಜ ಎಂ,ಗೀತಾ ಶೆಟ್ಟಿ, ರಾಜೇಶ್ ಮೋನಿಸ್, ಸರಸ್ವತಿ, ಮೋಹನ್ ಸಫಲ್ಯ, ಪರಿಶಿಷ್ಟ ಜಾತಿ ವಾಸು ಕೆ., ಪರಿಶಿಷ್ಟ ಪಂಗಡದಿಂದ ಪ್ರಶಾಂತ ನಾಯ್ಕ, ಹಿಂದುಳಿದ ವರ್ಗ ಎ ಭೋಜ ಪೂಜಾರಿ, ಹಿಂದುಳಿದ ವರ್ಗ ಬಿ ಇಜಿದೋರ್ ರೊಡ್ರಿಗಸ್, ಮಹಿಳಾ ಮೀಸಲಾತಿ ಉಷಾ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಚುನಾವಣಾ ಅಧಿಕಾರಿಯಾಗಿ ಬಿ. ವಿ.ಪ್ರತಿಮಾ ಭಾಗವಹಿಸಿದ್ದರು. ಕಾರ್ಯದರ್ಶಿ ಪ್ರಶಾಂತ್ ಹಾಗೂ ಸಿಬ್ಬಂದಿ ವರ್ಗ ಸಹಕರಿಸಿದರು.

LEAVE A REPLY

Please enter your comment!
Please enter your name here