ವೇಣೂರು ಪೊಲೀಸ್ ಠಾಣೆಯ ಜಯಶ್ರೀ ಅವರಿಗೆ ಮಹಿಳಾ ಹೆಡ್ ಕಾನ್ ಸ್ಟೇಬಲ್ ಹುದ್ದೆಗೆ ಮುಂಬಡ್ತಿ

0

ಬೆಳ್ತಂಗಡಿ: 2015ರಲ್ಲಿ ಇಲಾಖೆಗೆ ಸೇರ್ಪಡೆಗೊಂಡು ಬೆಳ್ತಂಗಡಿ ಠಾಣೆಯಲ್ಲಿ ಪ್ರಥಮವಾಗಿ ಕರ್ತವ್ಯ ನಿರ್ವಹಿಸಿ ತದನಂತರ ಪುಂಜಾಲಕಟ್ಟೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಇಲಾಖೆಯ ಸಾಮಾನ್ಯ ವರ್ಗಾವಣೆಯಲ್ಲಿ 2025 ನೇ ಜೂನ್ ತಿಂಗಳಲ್ಲಿ ವೇಣೂರು ಪೊಲೀಸ್‌ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು.

ಪ್ರಸ್ತುತ ಸರಕಾರದ ಆದೇಶದಂತೆ ಇಲಾಖಾ ಮುಂಬಡ್ತಿ ಪ್ರಕ್ರಿಯೆಯಲ್ಲಿ ಮಹಿಳಾ ಕಾನ್ ಸ್ಟೇಬಲ್ ಹುದ್ದೆಯಿಂದ ಮಹಿಳಾ ಹೆಡ್ ಕಾನ್ ಸ್ಟೇಬಲ್ ಹುದ್ದೆಗೆ ಮುಂಬಡ್ತಿ ಪಡೆದು ವೇಣೂರು ಠಾಣೆಗೆ ಕರ್ತವ್ಯಕ್ಕೆ ಅವರು ಹಾಜರಾಗಿದ್ದಾರೆ.

ಜಯಶ್ರೀ ಅವರು ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹರ್ಷಿತ್ ಅವರ ಧರ್ಮ ಪತ್ನಿಯಾಗಿದ್ದು, ಬೆಳಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಕಾಪಿನಡ್ಕ ನಿವಾಸಿ ಡೀಕಮ್ಮ ಅವರ ಮಗಳು.

LEAVE A REPLY

Please enter your comment!
Please enter your name here