







ಉಜಿರೆ: ಕಳೆಂಜ ಗ್ರಾಮದ ಕಾಯರ್ತಡ್ಕದಲ್ಲಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ನಂದಗೋಕುಲ ಗೋಶಾಲೆಗೆ ಉಜಿರೆಯ ಸುಗುಣಶ್ರೀ ನಿವಾಸಿ ಪ್ರಸ್ತುತ ಅಮೇರಿಕಾದ ಪುತ್ತಿಗೆ ಮಠದಲ್ಲಿ ಪ್ರಧಾನ ಅರ್ಚಕರಾಗಿ ವೈದಿಕ ವೃತ್ತಿ ನಡೆಸಿಕೊಂಡು ಬರುತ್ತಿರುವ ಕಿರಣ್ ರಾವ್ ಅವರು ತಮ್ಮ ಮಾತೃಶ್ರೀ ಆಶಾ ಚಿದಾನಂದ ರಾವ್ ಅವರ ಮೂಲಕ ನಂದಗೋಕುಲ ಗೋಶಾಲೆಯ ನೀರಿನ ಟ್ಯಾಂಕ್ ಮತ್ತು ಪೈಪ್ ಲೈನ್ ಕಾಮಗಾರಿಗಳಿಗಾಗಿ ರೂ 5 ಲಕ್ಷದ ವಿಶೇಷ ಕೊಡುಗೆಯನ್ನು ಟ್ರಸ್ಟ್ ಅಧ್ಯಕ್ಷ ಡಾ|ಎಂ.ಎಂ.ದಯಾಕರ್ ಅವರಿಗೆ ಚೆಕ್ ಹಸ್ತಾಂತರಿಸಿದರು.



ಡಾ|ಎಂ.ಎಂ.ದಯಾಕರ್ ಕಿರಣ್ ರಾವ್ ನೀಡಿದ ಗೋಸೇವೆಗಾಗಿ ಕೃತಜ್ಞತೆ ಸಲ್ಲಿಸಿದರು.









