






ಮಂಗಳೂರು: Dakshina Kannada District Central Cooperative Bank ಅಧ್ಯಕ್ಷರಾದ ಡಾ. ರಾಜೇಂದ್ರ ಕುಮಾರ್ ಅವರ 77ನೇ ಜನ್ಮದಿನಾಚರಣೆ ಅಂಗವಾಗಿ ಮಂಗಳೂರಿನ ಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿಯಲ್ಲಿ ಆತ್ಮೀಯ ಸಮಾರಂಭ ಜರುಗಿತು.
ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸಿರುವ ಡಾ. ರಾಜೇಂದ್ರ ಕುಮಾರ್ ಅವರ ದೂರದೃಷ್ಟಿಯ ನಾಯಕತ್ವವನ್ನು ಈ ಸಂದರ್ಭದಲ್ಲಿ ಗಣ್ಯರು ಕೊಂಡಾಡಿದರು. ಬ್ಯಾಂಕಿನ ಪ್ರಗತಿ, ಸದಸ್ಯರ ವಿಶ್ವಾಸ ಹಾಗೂ ಗ್ರಾಮೀಣ ಆರ್ಥಿಕ ಬಲವರ್ಧನೆಗೆ ಅವರ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟರು.


ನಿಡ್ಲೆ ಸಿಎ ಬ್ಯಾಂಕಿನ ಅಧ್ಯಕ್ಷರಾದ ಧನಂಜಯ ಗೌಡ, ನಿರ್ದೇಶಕರಾದ ಮೋಹನ್ ಸುವರ್ಣ (ನಿಡ್ಲೆ), ಆನಂದ ಗೌಡ (ಕಾಟ್ಲ), ಗಾಯತ್ರಿ (ಬರೆಂಗಾಯ), ರಾಜೇಶ್ (ನೇಲ್ಯ ಪಳಿಕೆ), ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮನಾಭ ಪಿ ಹಾಗೂ ಕಳೆಂಜ ಪಂಚಾಯತ್ ಮಾಜಿ ಸದಸ್ಯ ಪ್ರವೀಣ್ ಬಟ್ಯಾಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾರ್ದಿಕ ಶುಭಾಶಯಗಳನ್ನು ಅರ್ಪಿಸಿದರು.
ಡಾ. ರಾಜೇಂದ್ರ ಕುಮಾರ್ ಅವರ ಸೇವೆ ಇನ್ನೂ ದೀರ್ಘ ಕಾಲ ಮುಂದುವರಿದು ಸಹಕಾರಿ ಕ್ಷೇತ್ರ ಮತ್ತಷ್ಟು ಉತ್ತುಂಗಕ್ಕೇರಲಿ ಎಂದು ಹಾರೈಸಿದರು. ಕಾರ್ಯಕ್ರಮವು ಗೌರವಭರಿತ ಹಾಗೂ ಹರ್ಷಭರಿತ ವಾತಾವರಣದಲ್ಲಿ ನೆರವೇರಿತು.









