






ಮಂಗಳೂರು: Dakshina Kannada District Central Cooperative Bank ಅಧ್ಯಕ್ಷರಾದ Dr. Rajendra Kumar ಅವರ 77ನೇ ಜನ್ಮದಿನಾಚರಣೆ ಅಂಗವಾಗಿ ಮಂಗಳೂರಿನ ಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿಯಲ್ಲಿ ಆತ್ಮೀಯ ಸಮಾರಂಭ ಜರುಗಿತು.



ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸಿರುವ ಡಾ. ರಾಜೇಂದ್ರ ಕುಮಾರ್ ಅವರ ದೂರದೃಷ್ಟಿಯ ನಾಯಕತ್ವವನ್ನು ಈ ಸಂದರ್ಭದಲ್ಲಿ ಗಣ್ಯರು ಕೊಂಡಾಡಿದರು. ಬ್ಯಾಂಕಿನ ಪ್ರಗತಿ, ಸದಸ್ಯರ ವಿಶ್ವಾಸ ಹಾಗೂ ಗ್ರಾಮೀಣ ಆರ್ಥಿಕ ಬಲವರ್ಧನೆಗೆ ಅವರ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟರು.
ಬೆಳ್ತಂಗಡಿ ಸಿಎ ಬ್ಯಾಂಕಿನ ನಿರ್ದೇಶಕ ಶ್ರೀನಾಥ್ ಕೆ.ಎಂ ಹಾಗೂ ಬೆಳ್ತಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸಾದ್ ಜೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹಾರ್ದಿಕ ಶುಭಾಶಯಗಳನ್ನು ಅರ್ಪಿಸಿದರು. ಅವರ ಸೇವೆ ಇನ್ನೂ ದೀರ್ಘ ಕಾಲ ಮುಂದುವರಿದು ಸಹಕಾರಿ ಕ್ಷೇತ್ರ ಮತ್ತಷ್ಟು ಉತ್ತುಂಗಕ್ಕೇರಲಿ ಎಂದು ಹಾರೈಸಿದರು.









