







ಮಚ್ಚಿನ: ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮ ಕಲಶ ಮಾ. 29ರಿಂದ ನಡೆಯಲಿದ್ದು ಇಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಯು ನಡೆಯುತ್ತಿದ್ದು ಭವ್ಯವಾದ ನೂತನ ಬ್ರಹ್ಮರಥದ ಮಹಿಮೆ ಮೆರವಣಿಗೆಯ ಮಾ.1 ರಂದು ಸಾಯಂಕಾಲ ಗಂಟೆ 04-00ರಿಂದ ಹರೀಶ್ ಆಚಾರ್ಯ ಬೋಳಿಯಾರು ಇವರಿಂದ ವಾಸ್ತುಶಾಸ್ತ್ರ ಪ್ರಕಾರ ದಾರು ಶಿಲ್ಪ ವೈಭವದಿಂದ ಕೂಡಿ ನಿರ್ಮಿಸಲ್ಪಟ್ಟ ಶ್ರೀ ಕ್ಷೇತ್ರದ ಷಷ್ಠಿ ಮಹೋತ್ಸವದ
ಭವ್ಯವಾದ ನೂತನ ಬ್ರಹ್ಮರಥದ ಮಹಿಮೆ ಮೆರವಣಿಗೆಯು ಪಂಚಕಟ್ಟೆ ಬಸವೇಶ್ವರ ದೇವಸ್ಥಾನ ಬಸವನಗುಡಿಯಿಂದ ಪ್ರಾರಂಭವಾಗಿ ಸಾಯಂಕಾಲ ಗಂಟೆ 06-00ಕ್ಕೆ ನಡೆಯುವ ಸಿಂಹ ಲಗ್ನ ಸುಮೂರ್ತದಲ್ಲಿ ನೂತನ ಬ್ರಹ್ಮರಥವನ್ನು ಶ್ರೀ ಕ್ಷೇತ್ರ ಬಳ್ಳಮಂಜದಲ್ಲಿ ಸ್ವಾಗತಿಸಲಾಗುವುದು.

ರಾತ್ರಿ ಕೊಡಿಮರದ ಅಧಿವಾಸದ ಧಾರ್ಮಿಕ ವಿಧಿವಿಧಾನಗಳು ನಡೆಯುವುದರೊಂದಿಗೆ ಪಾಲ್ಗುಣ ಚತುರ್ದಶೀ ಮಾ. 02 ಸೋಮವಾರದಂದು ಬೆಳಗ್ಗೆ ಗಂಟೆ 09-00ಕ್ಕೆ ಸರಿಯಾಗಿ ನಡೆಯುವ ಮೀನ ಲಗ್ನ ಸುಮುಹೂತದಲ್ಲಿ, ಬ್ರಹ್ಮಶ್ರೀ ದೇರೆಬೈಲು ಡಾ ಶಿವಪ್ರಸಾದ ತಂತ್ರಿವರೇಣ್ಯರ ಮಾರ್ಗದರ್ಶನದಲ್ಲಿ ಆಧಾರ ಶಿಲೆ, ನಪುಂಸಕ ಶಿಲೆ ಪ್ರತಿಷ್ಠೆ, ರತ್ನನ್ಯಾಸಪೂರ್ವಕ ನೂತನ ಧ್ವಜಸ್ಥಂಭದ ದಾರು ಪ್ರತಿಷ್ಠೆ ನಡೆಯಲಿದೆ.


ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಗವದ್ಭಕ್ತರಾದ ತಾವೆಲ್ಲರೂ ಯಥಾಯೋಗ್ಯವಾಗಿ ಪಾಲ್ಗೊಂಡು ತನು ಮನ ಧನಗಳಿಂದ ಸಹಕರಿಸಿ ಶ್ರೀ ಅನಂತೇಶ್ವರ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ
ಅನುವಂಶೀಯ ಆಡಳಿತ ಮೊಕ್ತೇಸರ ಡಾ.ಎಂ. ಹರ್ಷ ಸಂಪಿಗೆತ್ತಾಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆರವಣಿಗೆ ಉದ್ಘಾಟನೆ ಶ್ರೀ ಬಸವೇಶ್ವರ ದೇವಸ್ಥಾನ ಬಸವನಗುಡಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಶಾಂತ್ ಯಂ, ವಿಶೇಷ ಅಭ್ಯಾಗತರು ಬಂಟ್ವಾಳ ಮಾಜಿ ಶಾಸಕ ನಾಗರಾಜ ಶೆಟ್ಟಿ, ಬೆಳ್ತಂಗಡಿ ಉಪ ತಹಶೀಲ್ದಾರ ಜಯ ಪ್ರವೀಣ್.
ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮೊಕ್ತೇಸರ ನಾಗೇಶ್ ಪ್ರಭು, ಶ್ರೀ ಕ್ಷೇತ್ರ ಪಾರೆಂಕಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುನೀತ್ ಕುಮಾರ್,
ಮಡಂತ್ಯಾರು ಉದ್ಯಮಿ ವಿಠಲ ಶೆಟ್ಟಿ ಮೂಡಾಯೂರು, ವಾಣಿಜ್ಯೋದ್ಯಮಿ ಮಂಗಳೂರು ವಾಸುದೇವ ಭಟ್ ಕುಂಜತ್ತೋಡಿ, ತಣ್ಣೀರುಪಂತ ಸಿ ಎ ಬ್ಯಾಂಕ್
ಉಪಾಧ್ಯಕ್ಷ ಸುನಿಲ್ ಆನಾವು.
ಉಪಹಾರದ ಸೇವಾಕರ್ತರು :
ಸುಪದ್ಮ ನಿತ್ಯಾನಂದ ಹೆಗ್ಡೆ ಮಡಂತ್ಯಾರು, ಸುಧಾ ಯಶವಂತ ಗೌಡ ಕುದುಂಗು,
ಜಯಪ್ರಕಾಶ್, ಅಶ್ವಿನಿ ಎಂಟರ್‌ಪ್ರೈಸಸ್ ಪಂಜಾಲಕಟ್ಟೆ, ಗಂಗಾಧರ, ಮಿತ್ರ ವೀಲ್ ಮಾಸ್ಟರ್ ಭಾಗವಹಿಸುವರು.









